ಇನ್ನೆರಡು ತಿಂಗಳು ಸಾಮೂಹಿಕ ನಮಾಝ್ ಸೇರಿದಂತೆ ಧಾರ್ಮಿಕ ಚಟುವಟಿಕೆಗೆ ನಿರ್ಬಂಧ

Update: 2020-06-03 14:29 GMT

ಬೆಳ್ತಂಗಡಿ, ಜೂ.3: ಉಜಿರೆ ಹಳೆಪೇಟೆ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಉಪ ಜಮಾಅತ್ ವ್ಯಾಪ್ತಿಯ ಮಸೀದಿಗಳನ್ನು ಮುಂದಿನ 2 ತಿಂಗಳವರೆಗೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸದಿರಲು, ಸಾಮೂಹಿಕ ನಮಾಝ್ ಸೇರಿದಂತೆ ಎಲ್ಲ ಧಾರ್ಮಿಕ ಚಟುವಟಿಕೆಗಳನ್ನು ಎಲ್ಲರೂ ಒಂದುಗೂಡಿ ನಿರ್ವಹಿಸದೇ ಇರಲು ನಿರ್ಧರಿಸಿದೆ.

ಮಸೀದಿ ಅಧ್ಯಕ್ಷ ಬಿ.ಎಂ. ಅಬ್ದುಲ್ ಹಮೀದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಸಮಿತಿಯ ಸಭೆಯಲ್ಲಿ ಕೇಂದ್ರ ಮಸ್ಜಿದ್ ಮತ್ತು ಎಲ್ಲ 6 ಮೊಹಲ್ಲಾಗಳಲ್ಲೂ ಇದೇ ತೀರ್ಮಾನ ಜಾರಿ ಮಾಡುವುದೆಂದು ನಿರ್ಧಾರಕ್ಕೆ ಬರಲಾಯಿತು.

ಸರಕಾರ ಒಂದು ವೇಳೆ ಮಸೀದಿಗಳನ್ನು ತೆರೆಯುವಂತೆ ಸೂಚನೆ ನೀಡಿದರೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಕೇಂದ್ರ ಮಸ್ಜಿದ್‌ನಲ್ಲಿ ಕೋವಿಡ್ ನಿಯಮಾವಳಿ ಪಾಲಿಸಲು ಅಸಾಧ್ಯವಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಅತೀ ಹೆಚ್ಚು ಕುಟುಂಬಗಳು ನೆಲೆಸಿರುವ ಮಸ್ಜಿದ್‌ನಲ್ಲಿ ನಿಯಂತ್ರಣ ಕೂಡ ಕಷ್ಟ ಸಾಧ್ಯವಾಗಲಿದೆ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಅದೇ ರೀತಿ ಮದ್ರಸ ಆರಂಭಿಸುವ, ಆನ್ಲೈನ್ ತರಗತಿ ಆರಂಭಿಸುವ ಬಗ್ಗೆಯಾಗಲೀ, ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಬಗ್ಗೆ ಎರಡು ತಿಂಗಳವರೆಗೆ ಕಾದು ನೋಡುವ ಬಗ್ಗೆ ನಿರ್ಧಾರಕ್ಕೆ ಬರಲಾಯಿತು.

ಸಭೆಯಲ್ಲಿ ಆಡಳಿತ ಕಮಿಟಿ ಸದಸ್ಯರು, ಆಯಾಯ ಜಮಾಅತ್ ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News