ಉಡುಪಿ ಜಿಲ್ಲೆಯ 17 ಗ್ರಾಮಗಳ 26 ಪ್ರದೇಶಗಳಲ್ಲಿ ಸೀಲ್‌ಡೌನ್

Update: 2020-06-03 17:11 GMT

ಉಡುಪಿ, ಜೂ.3: ಕೊರೋನ ಪಾಸಿಟಿವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಂಕಿತ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್‌ಎಎಸ್ಸೈ ಮನೆ ಸಹಿತ ಒಟ್ಟು 26 ನಿಗದಿತ ಪ್ರದೇಶವನ್ನು ಇಂದು ಸೀಲ್‌ಡೌನ್ ಮಾಡಲಾಗಿದೆ.

ಕಾಪು ತಾಲೂಕಿನ ಶಿರ್ವ ಗ್ರಾಮದ ಬಲ್ಲಾಡಿ ಎಂಬಲ್ಲಿರುವ ಡಿಎಆರ್ ಎಎಸ್ಸೈ ಅವರ ಮನೆಯ ಪ್ರದೇಶವನ್ನು ಕಂಟೇನ್‌ಮೆಂಟ್ ಮತ್ತು ಇಡೀ ಶಿರ್ವ ಗ್ರಾಮವನ್ನು ಬಫರ್ ವಲಯವನ್ನಾಗಿ ಘೋಷಿಸಲಾಗಿದೆ. ಸೋಂಕಿತರು ಈಗಾ ಗಲೇ ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಕಂಟೇನ್‌ಮೆಂಟ್ ವಲಯ ವ್ಯಾಪ್ತಿಯಲ್ಲಿ ಒಟ್ಟು ಎರಡು ಮನೆಗಳು ಬರುತ್ತವೆ.

ಬೈಂದೂರು ತಾಲೂಕಿನಲ್ಲಿ ಒಟ್ಟು ಏಳು ಗ್ರಾಮಗಳ 15 ಕಡೆಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ. ಯಡ್ತರೆ ಗ್ರಾಮದ ಆರು ಪ್ರತ್ಯೇಕ ಮನೆ, ಮರವಂತೆ ಗ್ರಾಮದ ಪ್ರತ್ಯೇಕ ನಾಲ್ಕು ಮನೆ(ಒಟ್ಟು ಏಳು ಮಂದಿ ಸೋಂಕಿತರು), ಯಳಜಿತ್, ಜಡ್ಕಲ್, ನಾಡಾ, ಹಡವು, ಕೊಲ್ಲೂರು ಗ್ರಾಮ ಗಳಲ್ಲಿ ತಲಾ ಒಂದು ಮನೆಯ ಪ್ರದೇಶದ ಸುತ್ತಮುತ್ತಲು ಕಂಟೇನ್‌ಮೆಂಟ್ ರೆನ್ ಘೋಷಿಸಲಾಗಿದೆ. ಇಲ್ಲಿ ಒಟ್ಟು 19 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಕಳೆದ ಮೂರು ದಿನಗಳಲ್ಲಿ ಬೈಂದೂರು ತಾಲೂಕಿನ ಒಟ್ಟು 27 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಎರಡು, ತಲ್ಲೂರು ಮತ್ತು ಬೀಜಾಡಿ ಗ್ರಾಮಗಳ ತಲಾ ಒಂದು ಕಡೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುಲ್ವಾಡಿ ಮತ್ತು ಕರ್ಕುಂಜೆ ಗ್ರಾಮಗಳನ್ನು ಕಂಟೇನ್‌ಮೆಂಟ್ ವಲಯವನ್ನಾಗಿ ಘೋಷಿಸ ಲಾಗಿದೆ. ಅದೇ ರೀತಿ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಕ್ಲಾಡಿ ಗ್ರಾಮದ ಎರಡು ಕಡೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ.

ಬ್ರಹ್ಮಾವರ ತಾಲೂಕಿನ ಮತ್ತು ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ತೂರು ಗ್ರಾಮವನ್ನು ಸೀಲ್‌ಡೌನ್ ಮಾಡಿ, ಕಂಟೇನ್‌ಮೆಂಟ್ ವಲಯನ್ನಾಗಿ ಘೋಷಿಸಲಾಗಿದೆ. ತೋಟದ ಮಧ್ಯೆ ಇರುವುದರಿಂದ ಇಲ್ಲಿ ಒಂದು ಮನೆಯನ್ನು ಮಾತ್ರ ಇದರ ವ್ಯಾಪ್ತಿಗೆ ಒಳಪಡಿಸಲಾಗಿದೆ. ಈ ಮನೆಯಲ್ಲಿ ಸೋಂಕಿತ ಸಹಿತ ಒಟ್ಟು ಮೂರು ಮಂದಿ ವಾಸವಾಗಿದ್ದರು ಎಂದು ಅಧಿಕಾರಿ ಗಳು ಮಾಹಿತಿ ನೀಡಿದ್ದಾರೆ. ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಒಂದು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News