ಬಸ್ರೂರು ರಾಷ್ಟ್ರೀಯ ಹೆದ್ದಾರಿ ಜಲಾವೃತ: ವಾಹನ ಸಂಚಾರದಲ್ಲಿ ವ್ಯತ್ಯಯ

Update: 2020-06-03 17:24 GMT

ಕುಂದಾಪುರ, ಜೂ.3: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆ ಯಿಂದಾಗಿ ಜೂ.3ರಂದು ಬೆಳಗ್ಗೆ ಬಸ್ರೂರು ಮೂರುಕೈಯಿಂದ ವಿನಾಯಕ ನಿಲ್ದಾಣದವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಸಂಪೂರ್ಣ ಪ್ರದೇಶ ಜಲಾವೃತ ಗೊಂಡಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಅವೈಜ್ಞಾನಿಕ ಕಾಮಗಾರಿ ಯಿಂದಾಗಿ ಒಂದೇ ಮಳೆಗೆ ಕೃತಕ ನೆರೆ ಉಂಟಾಗಿದ್ದು, ಕಾರು, ದ್ವಿಚಕ್ರ, ಆಟೋರಿಕ್ಷಾಗಳ ಸಂಚಾರಕ್ಕೆ ಅಡ್ಡಿಯಾಯಿತು. ಇದರ ಪರಿಣಾಮ ಈ ರಸ್ತೆ ಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾ ಯಿತು. ಮೊಣಕಾಲಿನವರೆಗೂ ನೀರು ನಿಂತ ಪರಿಣಾಮ ಪಾದಾಚಾರಿಗಳು ರಸ್ತೆ ದಾಟಲು ಪರದಾಡುತ್ತಿರುವುದು ಕಂಡುಬಂತು.

ಈ ಕೃತಕ ನೆರೆಯಿಂದ ವಾಹನ ಸವಾರರು ಬೆಳಗ್ಗೆಯಿಂದ ಸಂಕಷ್ಟ ಅನುಭ ವಿಸುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ವಹಿಸಿ ಕೊಂಡಿ ರುವ ನವಯುಗ ಕಂಪೆನಿಯು ಈ ಸಮಸ್ಯೆ ಪರಿಹರಿಸಲು ಮುಂದಾಗದಿರು ವುದು ಸ್ಥಳೀಯರ ಆಕ್ರೋಶ ಕಾರಣವಾಯಿತು. ಬೆಳಗ್ಗೆ 11 ಗಂಟೆಯ ನಂತರ ಆಗಮಿಸಿದ ಕಂಪೆನಿಯ ಕಾರ್ಮಿಕರು ದುರಸ್ತಿ ಕಾರ್ಯಕ್ಕೆ ಮುಂದಾದರು. ಆದರೂ ಹೆದ್ದಾರಿಯಲ್ಲಿ ನಿಂತ ನೀರು ಇಳಿಕೆ ಯಾಗದಿರುವುದು ಕಂಡುಬಂತು.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂದಾಪುರ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಪರಿಶೀಲನೆ ನಡೆಸಿದರು. ಪುರಸಭೆಯ ಹಿಟಾಚಿ ಮೂಲಕ ಇಲ್ಲಿನ ಅವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸರಿಪಡಿಸುವ ಕಾರ್ಯ ಮಾಡಲಾಯಿತು. ಸಂಜೆ ವೇಳೆ ಗುತ್ತಿಗೆ ಕಂಪೆನಿಯ ಅಧಿಕಾರಿಗಳನ್ನು ಕರೆಸಿ ಸಮಸ್ಯೆ ಸರಿಪಡಿಸುವಂತೆ ಮುಖ್ಯಾಧಿಕಾರಿಗಳು ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News