ವಿದ್ಯುತ್ ಬಿಲ್ಲು ಪಾವತಿಯಲ್ಲಿ ರಿಯಾಯಿತಿಯ ಭರವಸೆ ನೀಡಿದ ಮೆಸ್ಕಾಂ ಕ್ರಮ ಶ್ಲಾಘನೀಯ: ವೆಲ್ಫೇರ್ ಪಾರ್ಟಿ

Update: 2020-06-03 17:52 GMT

ಮಂಗಳೂರು, ಜೂ. 3: ಕಳೆದ ಲಾಕ್ಡೌನ್ ದಿನಗಳಲ್ಲಿನ, ವಿದ್ಯುತ್ ಬಿಲ್ಲು ಬಹಳ ಅಧಿಕವಾಗಿ ಬಂದಿರುವುದಲ್ಲದೆ, ಸರಕಾರದ ವತಿಯಿಂದ ಘೋಷಿತ ಯಾವುದೇ ರೀತಿಯ ರಿಯಾಯಿತಿಗಳನ್ನು ನೀಡಲಾಗಿಲ್ಲವೆಂಬ ಗ್ರಾಹಕರ ಅನೇಕ ದೂರುಗಳು ನಮ್ಮ ಕಚೇರಿಗೆ ಲಭಿಸಿರುವುದನ್ನನುಸರಿಸಿ, ನಾವು ಮೇ 13 ರಂದು ಮೆಸ್ಕಾಂ ಅಧಿಕಾರಿಗಳಿಗೆ ಮಾಡಿದ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ ಮಂಗಳೂರು ಮೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಅಭಿನಂದಿಸಿರುವರು. 

 ಇಲಾಖೆಯಿಂದ ನೀಡಲಾದ ಈ ಬಗೆಗಿನ ಮಾಹಿತಿಗಳನ್ನು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ ಅವರು, ಮೆಸ್ಕಾಂ  ಇಲಾಖೆಯವರು, ನಿಗದಿತ ದರಕ್ಕಿಂತ ಮಿಗಿಲಾದ  ಯಾವುದೇ ರೀತಿಯ ಅಧಿಕವಾದ ದರವನ್ನು ಯಾರಿಗೂ ವಿಧಿಸಿರುವುದಿಲ್ಲವೆಂಬ ಸ್ಪಷ್ಟನೆಯನ್ನು ನೀಡಿದ್ದು, ಲಾಕ್-ಡೌನ್ ದಿನಗಳಲ್ಲಿ ಎಲ್ಲರೂ ಮನೆಯಲ್ಲೇ ಉಳಿದಿದ್ದ ಹಾಗೂ ಜತೆಗೆ ಈ ಬಾರಿಯ ಬೇಸಿಗೆ ಕಾಲದ ವಿಪರೀತ ಸೆಖೆಯ  ಕಾರಣ, ಪ್ಯಾನ್, ಎ. ಸಿ. ಬಳಕೆಯನ್ನು ಹೆಚ್ಚು ಮಾಡಿರಬಹುದಾದ್ದರಿಂದಲೇ, ಸಹಜವಾಗಿಯೇ ಪಾವತಿ ಮೊತ್ತ ಅಧಿಕ ಬಂದಿರುವುದಾಗಿದೆಯೆಂದು ತಿಳಿಸಿದರು.

ಉಳಿದಂತೆ ಸರಕಾರದ ವತಿಯಿಂದ ನೀಡಿರುವ ರಿಯಾಯಿತಿಗಳು ತಾಂತ್ರಿಕ ಕಾರಣದಿಂದ ಅಂದರೆ   ತಂತ್ರಾಂಶವನ್ನು ಅಳವಡಿಸುವ ಕಾರ್ಯಗಳನ್ನು ಸಮರ್ಪಕವಾಗಿ ಇನ್ನೂ ನಿರ್ವಹಿಸಲಾಗದ್ದರಿಂದ (ಸಿಸ್ಟಂ ಅಪ್ಡೇಟ್ ಗೊಳ್ಳದಿರುವುದರಿಂದ) ನೀಡಿರುವ ಬಿಲ್ಲುಗಳಲ್ಲಿ ಅಷ್ಟೊಂದು ವಿಷಯಗಳು ಪ್ರಾಯೋಗಿಕವಾಗಿ ಇನ್ನಷ್ಟೇ ಕಾರ್ಯರೂಪಕ್ಕೆ ಬರಬೇಕಾಗಿದೆ ಎಂಬುವುದಾಗಿ ಸಾರ್ವಜನಿಕ ಮಾಹಿತಿಗಾಗಿ ಅವರು ತಿಳಿಸಿದರು. 

ಮುಂದಿನ ದಿನಗಳಲ್ಲಿ ಸರಕಾರದ ಎಲ್ಲಾ ರೀತಿಯ ರಿಯಾಯಿತಿಗಳನ್ನು ಅದರಲ್ಲಿ ಅಳವಡಿಸಿದ ನಂತರ ಒಟ್ಟು ಮೊತ್ತದಲ್ಲಿ ಸಂಭಂಧಪಟ್ಟ ವಿನಾಯಿತಿಯನ್ನು ಕೈಗೊಳ್ಳುವುದಾಗಿ ಮೆಸ್ಕಾಂ ಇಲಾಖೆಯವರು ಭರವಸೆ ನೀಡಿದ್ದು, ಈ ಕುರಿತಂತೆ ಸಾರ್ವಜನಿಕರೆಲ್ಲರೂ ಸಕರಿಸುವಂತೆ ಕೋರಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News