ಪ್ರತಿಭಟನಕಾರರ ದಮನಕ್ಕೆ ವಿರೋಧ: ಅಮೆರಿಕ ಸೇನಾ ಸಲಹೆಗಾರ ಜೇಮ್ಸ್ ಮಿಲ್ಲರ್ ರಾಜೀನಾಮೆ

Update: 2020-06-03 17:56 GMT

ವಾಶಿಂಗ್ಟನ್,ಜೂ.3: ಪೊಲೀಸ್ ದೌರ್ಜನ್ಯಕ್ಕೆ ಜಾರ್ಜ್ ಫ್ಲಾಯ್ಡ್ ಬಲಿಯಾದ ಘಟನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಪೊಲೀಸರು ಬಲಪ್ರಯೋಗ ನಡೆಸಿದ್ದನ್ನು ವಿರೋಧಿಸಿ ಅಮೆರಿಕದ ಸೇನಾ ಸಲಹೆಗಾರ ಜೇಮ್ಸ್ ಮಿಲ್ಲರ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ವಾಶಿಂಗ್ಟನ್‌ನ ಸೈಂಟ್ ಜಾನ್ಸ್ ಚರ್ಚ್‌ಗೆ ಆಗಮಿಸುತ್ತಿದ್ದಾಗ ಅಲ್ಲಿ ಜಮಾಯಿಸಿದ್ದ ಪ್ರತಿಭಟನಕಾರರನ್ನು ಪೊಲೀಸರು ಅಶ್ರುವಾಯು ಸಿಡಿಸಿದ್ದರು. ಟ್ರಂಪ್ ಅವರು ಬೈಬಲ್ ಪುಸ್ತಕ ಹಿಡಿದು ಫೋಟೋಗ್ರಾಫರ್‌ಗಳಿಗೆ ಪೋಸ್ ನೀಡುವುದ್ದಕ್ಕೋಸ್ಕರವೇ ಅಲ್ಲಿಗೆ ಆಗಮಿಸಿದ್ದರು ಎನ್ನಲಾಗಿದೆ.

‘‘ ಪ್ರತಿಭಟನಕಾರರ ಮೇಲೆ ಇಂತಹ ಬಲ ಪ್ರಯೋಗವನ್ನು ಮಾಡದಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ತಡೆಯಲು ನಿಮಗೆ ಸಾಧ್ಯವಾಗದು. ಆದರೆ ನಿಮಗೆ ಅದನ್ನು ವಿರೋಧಿಸಬಹುದಾಗಿದೆ” ಎಂದು ಮಿಲ್ಲರ್ ಅವರು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಪ್ರತಿಭಟನಕಾರರ ಮೇಲೆ ಪೊಲೀಸ್ ದೌರ್ಜನ್ಯವನ್ನು ನೀವು ಕೂಡಾ ಬೆಂಬಲಿಸಿದ್ದೀರಿ ಎಂದು ಎಸ್ಪರ್ ಅವರನ್ನು ಉದ್ದೇಶಿಸಿ ಮಿಲ್ಲರ್ ಹೇಳಿದ್ದಾರೆ.

ಪ್ರಸಕ್ತ ಅವರು ರಕ್ಷಣಾ ಇಲಾಖೆ ವಿಜ್ಞಾನ ಮಂಡಳಿಯಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜೇಮ್ಸ್ ಮಿಲ್ಲರ್ ಅವರು ರಕ್ಷಣಾ ನೀತಿಗಾಗಿನ ಅಧೀನ ಕಾರ್ಯದರ್ಶಿಯಾಗಿ ಯೂ2012ರಿಂದ 2014ರವರೆಗೆ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News