ಪ್ರತಿಭಟನೆ ಹತ್ತಿಕ್ಕಲು ಸೇನೆ ನಿಯೋಜನೆ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್

Update: 2020-06-03 18:03 GMT

ವಾಶಿಂಗ್ಟನ್,ಮೇ 21: ಜಾರ್ಜ್ ಫ್ಲಾಯ್ಡ್ ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ಘಟನೆಯ ವಿರುದ್ಧ ಅಮೆರಿಕದಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆಯನ್ನು ಕಳುಹಿಸುವ ನಿರ್ಧಾರದಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಭಾರೀ ಹಿಂಸೆಗೆ ಸಾಕ್ಷಿಯಾಗಿದ್ದ ವಾಶಿಂಗ್ಟನ್, ನ್ಯೂಯಾರ್ಕ್, ಮಿನ್ನೆಪೊಲಿಸ್ ನಗರಗಳಲ್ಲಿ ಮಂಗಳವಾರ ಗಲಭೆ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸೇನಾ ಪಡೆಗಳನ್ನು ಕಳುಹಿಸದಿರಲು ತೀರ್ಮಾ ನಿಸಲಾಗಿದೆಯೆಂದು ಶ್ವೇಭವನದ ಮೂಲಗಳು ತಿಳಿಸಿವೆ.

ದೇಶದ ವಿವಿಧೆಡೆ ಹಿಂಸಾಚಾರಕ್ಕಿಳಿದಿರುವ ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ವಾಶಿಂಗ್ಟನ್‌ನಲ್ಲಿ ಸೇನೆಯನ್ನು ನಿಯೋಜಿಸಲು ಟ್ರಂಪ್ ಬಯಸಿದ್ದರು ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ವೇಳೆ ರಾಜಧಾನಿ ವಾಶಿಂಗ್ಟನ್‌ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟ್ದಲ್ಲಿ ಶ್ವೇತಭವನ ಮತ್ತಿತರ ಫೆಡರಲ್ ಕಟ್ಟಡಗಳನ್ನು ರಕ್ಷಿಸಲು ವಾಶಿಂಗ್ಟನ್‌ಗೆ ಸೈನಿಕರನ್ನು ನಿಯೋಜಿಸುವ ಯೋಜನೆಯನ್ನು ಟ್ರಂಪ್ ಸರಕಾರ ರೂಪಿಸಿತ್ತೆಂಬುದನ್ನು ದಿ ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆಗೆ ಲಭ್ಯವಾದ ದಾಖಲೆಗಳಿಂದ ತಿಳಿದುಬಂದಿದೆ.

     ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಎಲ್ಲಾ ಸಂಸ್ಥಾನಗಳ ಗವರ್ನರ್‌ಗಳಿಗೆ ರವಾನಿಸಿದ ಸಂದೇಶದಲ್ಲಿ, ಒಂದು ವೇಳೆ ಹಿಂಸಾತ್ಮಕ ಪ್ರತಿಭಟನೆಯನ್ನು ಹತ್ತಿಕ್ಕಲು ತಮ್ಮ ಬತ್ತಳಿಕೆಯಲ್ಲಿರುವ ಎಲ್ಲಾ ಅಸ್ತ್ರಗಳನ್ನು ಬಳಸದೆ ಇದ್ದಲ್ಲಿ, ಅವರು ಪರಿಹಾರ ಕಾರ್ಯ ಹಾಗೂ ನಷ್ಟ ಭರ್ತಿಗೆ ಫೆಡರಲ್ ಸರಕಾರದಿಂದ ನೆರವು ಪಡೆಯುವುದನ್ನು ನಿರೀಕ್ಷಿಸಬಾರದೆಂದು ತಿಳಿಸಿದ್ದರು.

 ಸೋಮವಾರ ವಾಶಿಂಗ್ಟನ್‌ನಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದ ಬಳಿಕ ನಗರಕ್ಕೆ ಅಮೆರಿಕ ಸೇನೆಯ 82ನೇ ಏರ್‌ಬೊರ್ನ್ ವಿಭಾಗದ 715 ಸೈನಿಕರ ತುಕಡಿಯೊಂದು ಆಗಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News