ಭಾರತಕ್ಕೆ ಮುಂದಿನ ವಾರ ಅಮೆರಿಕದಿಂದ 100 ವೆಂಟಿಲೇಟರ್ ಪೂರೈಕೆ

Update: 2020-06-03 18:07 GMT

ವಾಶಿಂಗ್ಟನ್,ಜೂ.3: ಕೊರೋನ ವೈರಸ್ ರೋಗಿಗಳ ಚಿಕಿತ್ಸೆಗಾಗಿ ಅಮೆರಿಕವು ಭಾರತಕ್ಕೆ ದೇಣಿಗೆಯಾಗಿ ನೀಡಿರುವ 100 ವೆಂಟಿಲೇಟರ್‌ಗಳ ಮೊದಲ ಸಂಗ್ರಹವು ಮುಂದಿನ ವಾರ ಭಾರತಕ್ಕೆ ಆಗಮಿಸಲಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಗುರುವಾರ ಮಾಡಿದ್ದ ವಿಡಿಯೋಕಾನ್ಫರೆನ್ಸ್ ಮಾತುಕತೆಯಲ್ಲಿ ಈ ವಿಷಯ ತಿಳಿಸಿದ್ದಾರೆಂದು ಶ್ವೇತಭವನದ ಹೇಳಿಕೆಯೊಂದು ತಿಳಿಸಿದೆ.

  ಮಾತುಕತೆಯ ವೇಳೆ ಉಭಯ ನಾಯಕರು ಜಿ-7 ಶೃಂಗಸಭೆ, ಕೋವಿಡ್-19 ವಿರುದ್ಧ ಹೋರಾಟ ಹಾಗೂ ಪ್ರಾದೇಶಿಕ ಭದ್ರತಾ ವಿಷಯಗಳ ಬಗ್ಗೆಯೂ ಚರ್ಚಿಸಿದ್ದಾರೆಂದು ಅವರು ಹೇಳಿದ್ದಾರೆ.

ಅಮೆರಿಕ, ಬ್ರೆಝಿಲ್, ರಶ್ಯ, ಬ್ರಿಟನ್, ಸ್ಪೇನ್ ಹಾಗೂ ಇಟಲಿ ಬಳಿಕ ಕೋವಿಡ್-19 ಸಾಂಕ್ರಾಮಿಕದಿಂದ ಅಧಿಕವಾಗಿ ಬಾಧಿತವಾಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ು ಏಳನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News