ಜೂನ್ 16ರಿಂದ ಅಮೆರಿಕದಲ್ಲಿ ಚೀನಾ ವಿಮಾನಗಳ ಹಾರಾಟ ರದ್ದು

Update: 2020-06-03 18:13 GMT

ವಾಶಿಂಗ್ಟನ್,ಜೂ.2: ಚೀನಾದ ಎಲ್ಲಾ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಿ ಅಮೆರಿಕ ಮಂಗಳವಾರ ಆದೇಶ ಹೊರಡಿಸಿದೆ. ಚೀನಾದಲ್ಲಿ ಅಮೆರಿಕದ ವಿಮಾನಗಳ ಸೇವೆಯನ್ನು ಪುನಾರಂಭಿಸುವುದಕ್ಕೆ ಬೀಜಿಂಗ್ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಅಮೆರಿಕದ ಸಾರಿಗೆ ಇಲಾಖೆ (ಡಿಓಟಿ) ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ ಜೂನ್ 1ರಿಂದ ಆರಂಭಗೊಳ್ಳುವಂತೆ ಚೀನಾದಲ್ಲಿ ಹಾರಾಟವನ್ನು ಪುನಾರಂಭಿಸಲು ಅವಕಾಶ ನೀಡುವಂತೆ ಅಮೆರಿಕದ ವಿಮಾನಯಾನ ಸಂಸ್ಥೆಗಳು ಮನವಿ ಮಾಡಿದ್ದವು. ಆದರೆ ಅವರ ಮನವಿಗೆ ಅನುಮೋದನೆ ನೀಡಲು ಚೀನಾ ಸರಕಾರ ವಿಫಲವಾಗಿರುವುದು ವಿಮಾನ ಸಾರಿಗೆ ಒಪ್ಪಂದದ ಉಲ್ಲಂಘನೆಯಾಗಿದೆ’’ಯೆಂದು ಅದು ಹೇಳಿದೆ.

  ಅಮೆರಿಕಕ್ಕೆ ಚೀನಾದ ಎಲ್ಲಾ ವಿಮಾನಗಳ ಆಗಮನ ಹಾಗೂ ನಿರ್ಗಮನವನ್ನು ರದ್ದುಪಡಿಸುವ ಆದೇಶವು ಜೂನ್ 16ರಂದು ಜಾರಿಗೆ ಬರಲಿದೆ. ಆದರೆ ಒಂದು ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದಲ್ಲಿ ಅದಕ್ಕಿಂತಲೂ ಶೀಘ್ರವಾಗಿ ಜಾರಿಗೆ ಬರಬಹುದಾಗಿದೆ ಎಂದು ಡಿಓಟಿ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News