‘ಟ್ವೆಂಟಿ -20 ವಿಶ್ವಕಪ್ ನ್ಯೂಝಿಲ್ಯಾಂಡ್‌ನಲ್ಲಿ ನಡೆಸಬಹುದು’ : ಡೀನ್ ಜೋನ್ಸ್

Update: 2020-06-04 06:07 GMT

ಸಿಡ್ನಿ, ಜೂ.3: ‘‘ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿನಿಗದಿಯಾಗಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯನ್ನು ನ್ಯೂಝಿಲ್ಯಾಂಡ್‌ನಲ್ಲಿ ನಡೆಸಬಹುದಾಗಿದೆ. ಈ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯನ್ನು ನಿಯಂತ್ರಿಸಲಾಗಿದ್ದು, ನಿಧಾನವಾಗಿ ಸಹಜತೆಯತ್ತ ಸಾಗುತ್ತಿದೆ’’ ಎಂದು ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಗಾರ ಡೀನ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಝಿಲ್ಯಾಂಡ್‌ನಲ್ಲಿ ಕಳೆದ 12 ದಿನಗಳಿಂದ ಯಾವುದೇ ಹೊಸ ಕೊರೋನ ಪ್ರಕರಣ ದಾಖಲಾಗಿಲ್ಲ. ಇದೀಗ ಕೇವಲ ಒಂದು ಸಕ್ರಿಯ ಪ್ರಕರಣವಿದೆ.

ಟ್ವೆಂಟಿ-20 ವಿಶ್ವಕಪ್ ಆಸ್ಟ್ರೇಲಿಯದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರ ತನಕ ನಿಗದಿಪಡಿಸಲಾಗಿದೆ. ಈ ವರ್ಷ ಆಸ್ಟ್ರೇಲಿಯದಲ್ಲಿ ಟಿ-20 ವಿಶ್ವಕಪ್ ನಡೆಯುವ ಸಾಧ್ಯತೆಯನ್ನು ಜೋನ್ಸ್ ಈಗಾಗಲೇ ತಳ್ಳಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News