ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕಿಗೆ ನೆರವು ನೀಡಲು ಮನವಿ

Update: 2020-06-04 14:29 GMT

ಮಂಗಳೂರು, ಜೂ.4: ಶಿವಮೊಗ್ಗ ಜಿಲ್ಲೆಯ ಹರಿಗೆ ಎಂಬಲ್ಲಿನ ದಿ. ಮುಹಮ್ಮದ್ ರಫಿ ಮತ್ತು ಶಾಹಿನಾ ದಂಪತಿಯ ಪುತ್ರಿ ಮೆಹಕ್ ಜಿ. (15) ಎಂಬಾಕೆ ಕಳೆದ ಕೆಲವು ವರ್ಷದಿಂದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ದಾನಿಗಳಲ್ಲಿ ಮನವಿ ಮಾಡಿದ್ದಾರೆ.

ಸ್ಥಳೀಯ ಶಾಲೆಯಲ್ಲಿ 9ನೆ ತರಗತಿಯಲ್ಲಿ ಕಲಿಯುದ್ದ ಬಾಲಕಿಗೆ ರಕ್ತದ ಕ್ಯಾನ್ಸರ್‌ನಿಂದ ಕಲಿಕೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಈಗಾಗಲೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮೆಹಕ್‌ಳನ್ನು ಈಗಲೂ ಪ್ರತೀ ತಿಂಗಳು ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಬೇಕಾಗಿದೆ. ಆದರೆ ತಿಂಗಳಿಗೆ 10 ಸಾವಿರ ರೂ.ಖರ್ಚು ತಗಲುತ್ತಿದ್ದು, ಅಷ್ಟು ಹಣವನ್ನು ಭರಿಸಲಾಗದೆ ಈ ಕುಟುಂಬ ಪರದಾಡುತ್ತಿದೆ.

ಅಂದಹಾಗೆ ಮುಹಮ್ಮದ್ ರಫಿ-ಶಾಹಿನಾ ದಂಪತಿಗೆ ಮೂರು ಮಕ್ಕಳು. ಹಿರಿಮಗಳು ದ್ವಿತೀಯ ಪಿಯುಸಿ ಮತ್ತು ರಕ್ತದ ಕ್ಯಾನ್ಸರ್‌ನಿಂದ ಬಳಲುವ ಮೆಹಕ್ 9ನೆ ತರಗತಿಯಲ್ಲಿ ಹಾಗೂ ಒಬ್ಬ ಪುತ್ರ 5ನೆ ತರಗತಿಯಲ್ಲಿ ಓದುತ್ತಿದ್ದಾರೆ. ಮುಹಮ್ಮದ್ ರಫಿ ಮೃತಪಟ್ಟು 10 ವರ್ಷಗಳಾಗಿವೆ. ಆ ಬಳಿಕ ಶಾಹಿನಾ ಮಕ್ಕಳನ್ನು ಸಲಹುವ ಹೊಣೆ ಹೊತ್ತಿದ್ದಾರೆ. ಆರಂಭದಲ್ಲಿ ಮೊಟ್ಟೆ ವ್ಯಾಪಾರದೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಶಾಹಿನಾ ಬಳಿಕ ಮನೆ ಸಮೀಪದ ಟೈಲರ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೊರೋನ-ಲಾಕ್‌ಡೌನ್‌ನಿಂದಾಗಿ ಅಲ್ಲೂ ಕೆಲಸ ಕಳೆದುಕೊಂಡಿದ್ದಾರೆ. ಹಾಗಾಗಿ ಇದೀಗ ಮನೆಗೆಲಸ ಮಾಡಿಕೊಂಡು ಮಕ್ಕಳನ್ನು ಸಾಕುತ್ತಿದ್ದಾರೆ. ಅದರ ಮಧ್ಯೆ ಮಗಳ ಚಿಕಿತ್ಸೆಗೆ ಹಣ ಹೊಂದಿಸುವುದೇ ಶಾಹಿನಾರಿಗೆ ಸಮಸ್ಯೆಯಾಗಿದೆ.

ಶಾಹಿನಾರಿಗೆ ಸ್ವಂತ ಮನೆಯೂ ಇಲ್ಲ. ಚಿಕ್ಕಪ್ಪರ ಬಾಡಿಗೆ ಮನೆಯಲ್ಲೇ ಮೂವರು ಮಕ್ಕಳೊಂದಿಗೆ ಆಶ್ರಯ ಪಡೆದಿದ್ದಾರೆ. ಮಗಳ ಚಿಕಿತ್ಸೆಗಾಗಿ ಮಾಸಿಕ ಕನಿಷ್ಟ 10 ಸಾವಿರ ರೂ. ಬೇಕು. ಜೊತೆಗೆ ಮಕ್ಕಳ ವಿದ್ಯಾಭ್ಯಾಸ, ಅನ್ನ-ಬಟ್ಟೆಬರೆ ಎಂದೆಲ್ಲಾ ಕಷ್ಟದ ದಿನಗಳನ್ನು ಕಳೆಯುವ ಶಾಹಿನಾ ನೆರವಿಗಾಗಿ ಮನವಿ ಮಾಡಿದ್ದಾರೆ.

ಶಾಹಿನಾ ಅವರ ಖಾತೆ ಸಂಖ್ಯೆ: ಶಾಹಿನಾ, ಎಸ್‌ಬಿಐ ಖಾತೆ ಶಿವಮೊಗ್ಗ , ಎಸ್‌ಬಿ ಖಾತೆ ಸಂ: 64135398477, ಐಎಫ್‌ಎಸ್‌ಸಿ ಸಂ: SBI0040381

ಮಾಹಿತಿಗೆ ಮೊ.ಸಂ:9110484157ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News