​ಜೂ.8ರಿಂದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಿಂದ ದಾಖಲಾತಿ ಆರಂಭ

Update: 2020-06-04 12:08 GMT

ಮಂಗಳೂರು, ಜೂ.4: ನಗರದ ಪ್ರತಿಷ್ಠಿತ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ 1ರಿಂದ 9ನೇ ತರಗತಿವರೆಗಿನ ಶಾಲಾ ದಾಖಲಾತಿ ಪ್ರಕ್ರಿಯೆಯು ಜೂ.8ರಿಂದ ಪ್ರಾರಂಭವಾಗಲಿದೆ.

ರಾಜ್ಯ ಸರಕಾರದ ನಿಯಮಾವಳಿ ಪ್ರಕಾರ 10 ವರ್ಷದೊಳಗಿನ ಮಕ್ಕಳನ್ನು ದಾಖಲಾತಿಗೆ ಶಾಲೆಗೆ ಕರೆತರಬಾರದು. ಬದಲಾಗಿ ಅವರ ಪೋಷಕರು ಮಾತ್ರ ಬರಬಹುದು. ‌ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸುರಕ್ಷಿತ ಅಂತರ ಕಾಪಾಡಬೇಕು. ಶಾಲಾ ಆಡಳಿತ ಮಂಡಳಿಯು ಕೋವಿಡ್-19ರ ನಿಯಂತ್ರಣಕ್ಕೆ ಶಾಲೆಯಲ್ಲಿ ಕೈಗೊಳ್ಳಬೇಕಾದ ಎಲ್ಲ ನಿಯಮಗಳನ್ನು ರೂಪಿಸಿದೆ.

ಜೂ.10 ಮತ್ತು 11ರಂದು ಶಾಲೆಯ ಪೋಷಕರ ಸಭೆಯನ್ನು ಆಯೋಜಿಸಲಾಗಿದೆ. ಸುರಕ್ಷಿತ ಅಂತರ ಕಾಪಾಡುವ ದೃಷ್ಟಿಯಿಂದ ಸಭೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತಿದೆ. ಸರಕಾರದ ಸುತ್ತೋಲೆಯ ಪ್ರಕಾರ ಶಾಲೆಯನ್ನು ಪುನರಾಂಭಿಸುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಸರಕಾರಕ್ಕೆ ಸಲ್ಲಿಸಲಾಗುತ್ತದೆ.

ಸರಕಾರದಿಂದ ಆದೇಶ ಬಂದ ಮೇಲೆ ಶಾಲೆಯನ್ನು ಪುನರಾಂಭಿಸಲಾಗುವುದು. ವಿದ್ಯಾರ್ಥಿಗಳಿಗೆ ಸುರಕ್ಷಿತ ಅಂತರ ಕಾಪಾಡಿಕೊಂಡು ತರಗತಿ ನಡೆಸಲು ಅಗತ್ಯವಿರುವ ಕೊಠಡಿಗಳು ಹಾಗೂ ಪೀಠೋಪಕರಣಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News