ಉಡುಪಿ: ಸ್ಕೌಟ್-ಗೈಡ್ಸ್‌ನಿಂದ ವಿದ್ಯಾರ್ಥಿಗಳಿಗೆ ಮಾಸ್ಕ್ ಕೊಡುಗೆ

Update: 2020-06-04 12:19 GMT

ಉಡುಪಿ, ಜೂ.4: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ನಡೆಯುವ ಈ ಬಾರಿಯ ಎಸ್ಸೆಸೆಲ್ಸಿ ಪಬ್ಲಿಕ್ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಿಸುವ ಕಾರ್ಯಕ್ರಮ ಇತ್ತೀಚೆಗೆ ಮಣಿಪಾಲದಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಸ್ಕೌಟ್ ಆಯುಕ್ತ ಡಾ.ವಿಜಯೇಂದ್ರ ವಸಂತ್, ಒಟ್ಟು 15,000 ಮಾಸ್ಕ್‌ಗಳನ್ನು ಉಡುಪಿ ಜಿಪಂ ಅದ್ಯಕ್ಷ ದಿನಕರಬಾಬು ಅವರ ಮೂಲಕ ಉಡುಪಿಯ ಡಿಡಿಪಿಐ ಶೇಷಶಯನ ಕಾರಂಜ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಡಾ.ವಿಜಯೇಂದ್ರ ವಸಂತ್, ರಾಜ್ಯದಲ್ಲಿ ಒಂದು ಕೋಟಿ ಮಾಸ್ಕ್ ಸಿದ್ಧವಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಸಂಸ್ಥೆ ಹಾಗೂ ಬೈಂದೂರು, ಕುಂದಾಪುರ, ಬ್ರಹ್ಮಾವರ, ಕಲ್ಯಾಣಪುರ, ಉಡುಪಿ, ಕಾರ್ಕಳ ಮತ್ತು ಕಾಪು ಸ್ಥಳೀಯ ಸಂಸ್ಥೆಯ ಪದಾದಿಕಾರಿಗಳು, ಸ್ಕೌಟ್‌ಗೈಡ್ ವಿದ್ಯಾರ್ಥಿ ಗಳು, ಶಿಕ್ಷಕರು ಹಾಗೂ ಹೆತ್ತವರ ಸಹಕಾರದಿಂದ ಒಂದೂವರೆ ಲಕ್ಷ ಮಾಸ್ಕ್ ತಯಾರಿಸಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದರಲ್ಲಿ 15,000 ಮಾಸ್ಕ್‌ಗಳನ್ನು ಉಡುಪಿ ಜಿಪಂ ಅಧ್ಯಕ್ಷರಿಗೆ ಹಸ್ತಾಂತರಿಸಿದ್ದು, ಇದನ್ನು ಈ ಬಾರಿ ಎಸೆಸೆಲ್ಸಿ ಬರೆಯುವ ಎಲ್ಲಾ ವಿದ್ಯಾರ್ಥಿ ಗಳಿಗೆ ಅವರವರ ಪರೀಕ್ಷಾ ಕೇಂದ್ರಗಳಲ್ಲಿ ನಮ್ಮ ಸ್ಕೌಟ್, ಗೈಡ್ಸ್ ಸ್ವಯಂಸೇವಕರು ವಿತರಿಸಲು ಸಹಕರಿಸಲಿದ್ದಾರೆ ಎಂದೂ ಡಾ.ವಿಜಯೇಂದ್ರ ತಿಳಿಸಿದರು.

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳಾದ ಐ.ಕೆ.ಜಯಚಂದ್ರ, ಡಾ.ಜಯರಾಮ ಶೆಟ್ಟಿಗಾರ್, ಉಮೇಶ್ ಪೈ, ಗುಣರತ್ನ, ಫ್ಲೋರಿನ್, ರೇಖಾಯು, ಅನಿತಾ ಮೆಂಡೋನ್ಸಾ, ಭಾರತಿ ಚಂದ್ರಶೇಖರ್, ಸುಮನ್ ಶೇಖರ್, ಶಿಕ್ಷಣಾಧಿಕಾರಿಗಳಾದ ಅಶೋಕ್ ಕಾಮತ್, ಓ.ಆರ್. ಪ್ರಕಾಶ, ಮಂಜುಳಾ ಕೆ., ಜ್ಯೋತಿ ಬಿ., ಶಶಿಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News