ಕಾಸರಗೋಡು: ಗುರುವಾರ 12 ಮಂದಿಗೆ ಕೊರೋನ ಸೋಂಕು ದೃಢ

Update: 2020-06-04 15:04 GMT
ಸಾಂದರ್ಭಿಕ ಚಿತ್ರ

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಕೊರೋನ ಸೋಂಕು  ದೃಢಪಟ್ಟಿದೆ. ಇವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ. 6 ಮಂದಿ ಮಹಾರಾಷ್ಟ್ರದಿಂದ ಬಂದವರು, 5 ಮಂದಿ ವಿದೇಶದಿಂದ ಆಗಮಿಸಿದವರು, ಒಬ್ಬರಿಗೆ ಸಂಪರ್ಕದಿಂದ ರೋಗ ತಗುಲಿದೆ. ಈಗ ಜಿಲ್ಲೆಯಲ್ಲಿ 109 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರದಿಂದ ಆಗಮಿಸಿದ ಮಂಗಲ್ಪಾಡಿ ಗ್ರಾಮ ಪಂಚಾಯತ್ ನಿವಾಸಿ 50 ವರ್ಷದ ವ್ಯಕ್ತಿ, ಅವರ 16 ವರ್ಷದ ಪುತ್ರಿ, 21 ವರ್ಷದ ಮಹಿಳೆ, ಪಡನ್ನ ಗ್ರಾಮ ಪಂಚಾಯತ್ ನ 44 ವರ್ಷದ ವ್ಯಕ್ತಿ, ಚೆಂಗಳ ಗ್ರಾಮ ಪಂಚಾಯತ್ ನಿವಾಸಿ 42 ವರ್ಷದ ವ್ಯಕ್ತಿ, ವಲಿಯಪರಂಬ ನಿವಾಸಿ 48 ವರ್ಷದ ನಿವಾಸಿ, ಕುವೈತ್ ನಿಂದ ಆಗಮಿಸಿದ 34 ವರ್ಷದ ನೀಲೇಶ್ವರ ನಗರಸಭೆ ವ್ಯಾಪ್ತಿಯ ನಿವಾಸಿ, 24 ವರ್ಷದ ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ನಿವಾಸಿ, 25 ವರ್ಷದ ಅಜಾನೂರು ನಿವಾಸಿ, ದುಬೈಯಿಂದ ಆಗಮಿಸಿದ 21 ವರ್ಷದ ಚೆಮ್ನಾಡ್ ಗ್ರಾಮಪಂಚಾಯತ್ ನಿವಾಸಿ ಮಹಿಳೆ, ಶಾರ್ಜಾದಿಂದ ಆಗಮಿಸಿದ 48 ವರ್ಷದ ಉದುಮಾ ಪಂಚಾಯತ್ ನಿವಾಸಿಗೆ ಸೋಂಕು ದೃಢಪಟ್ಟಿದೆ.

ಕಾಸರಗೋಡು ನಗರಸಭೆ ವ್ಯಾಪ್ತಿಯ 25 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 3940 ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3269 ಮಂದಿ, ಆಸ್ಪತ್ರೆಗಳಲ್ಲಿ 671 ಮಂದಿ ನಿಗಾದಲ್ಲಿದ್ದಾರೆ. ಗುರುವಾರ ನೂತನವಾಗಿ 255 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 739 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News