ಪುತ್ತೂರು:ನಗರಸಭೆಯಿಂದ ಪೌರ ಕಾರ್ಮಿಕರಿಗೆ ಸುರಕ್ಷತಾ ಸಲಕರಣೆ ವಿತರಣೆ

Update: 2020-06-04 15:23 GMT

ಪುತ್ತೂರು: ಕೊರೋನ ಆತಂಕದ ನಡುವೆಯೂ ನಗರದ ಸ್ವಚ್ಛತೆಗೆ ಅವಿತರವಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂಬ ನಿಟ್ಟಿನಲ್ಲಿ ಮತ್ತು ಮುಂದೆ ಮಳೆಗಾಲ ಸೇರಿದಂತೆ ವಿವಿಧ ರೀತಿಯಲ್ಲಿ ಸಜ್ಜಗಾಗುವಂತೆ ಪುತ್ತೂರು ನಗರಸಭೆಯಿಂದ ಪೌರ ಕಾರ್ಮಿಕರಿಗೆ ಗುರುವಾರ ಮಾಸ್ಕ್, ಹ್ಯಾಂಡ್ ಗ್ಲೌಸ್, ಶೂ, ರೈನ್ ಕೋಟ್, ಹೆಲ್ಮೆಟ್ ವಿತರಿಸಲಾಯಿತು.

ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ಸುರಕ್ಷತಾ ಸಲಕರಣೆಗಳನ್ನು ವಿತರಣೆ ಮಾಡಿದರು. ಪೌರಕಾರ್ಮಿಕರ ಉತ್ತಮ ಆರೋಗ್ಯ ದೃಷ್ಟಿಯಿಂದ ಅವರನ್ನು ಅವಲಂಬಿತರಿಗೆ ಯಾವುದೆ ರೀತಿಯ ತೊಂದರೆ ಉಂಟಾಗಬಾರದು ಈ ನಿಟ್ಟಿನಲ್ಲಿ ನಗರಸಭೆಯ 50 ಮಂದಿ ಸ್ವಚ್ಛತಾ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರಿಗೆ ಸುರಕ್ಷತಾ ಸಲಕರಣೆ ವಿತರಣೆ ಮಾಡಲಾಗುತ್ತಿದೆ. ಮುಂದೆ ಮಳೆಗಾಲ ಆರಂಭ ಆಗುವ ಸಂದರ್ಭ ಸ್ವಚ್ಛತಾ ಕಾರ್ಮಿಕರು ಅನಾರೋಗ್ಯಕ್ಕೀಡಾಗಬಾರದು ಎಂಬ ಮುನ್ನೆಚ್ಚರಿಕೆ ಮತ್ತು ಮಳೆಗಾಲದಲ್ಲಿ ಅಗತ್ಯ ಕಾರ್ಯಾಚರಣೆ ವೇಳೆ ಯಾವುದೇ ಅಪಾಯ ಸಂಭವಿಸಬಾರದು ಎಂಬ ನಿಟ್ಟಿನಲ್ಲಿ ಅವರಿಗೆ ಸುರಕ್ಷತಾ ವಿತರಣೆ ಮಾಡಲಾಗಿದೆ ಎಂದು ರೂಪಾ ಶೆಟ್ಟಿ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News