ಜೂ. 5, 6ರಂದು ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ನಿಂದ ಪರಿಸರ ದಿನಾಚರಣೆ

Update: 2020-06-04 15:25 GMT

ಬಂಟ್ವಾಳ, ಜೂ. 4: ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ 'ಬಿತ್ತಿದರೆ ಮಾತ್ರ ಬೆಳೆ' ಎಂಬ ವಾಕ್ಯದಡಿಯಲ್ಲಿ ಪರಿಸರ ದಿನಾಚರಣೆ ನಡೆಯಲಿದ್ದು ಇದರ ಪ್ರಯುಕ್ತ ಜೂನ್ 5 ಮತ್ತು 6ರಂದು ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಎಸ್.ಎಸ್.ಆಡಿಟೋರಿಯಂನಲ್ಲಿ ಬುಧವಾರ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು. 

ಎಸ್ಕೆಎಸ್ಸೆಸ್ಸೆಫ್ ನ ಪ್ರತೀ ಕಾರ್ಯಕರ್ತರ ಮನೆಯಲ್ಲಿ ಗಿಡ ಹಾಗೂ ತರಕಾರಿ ಗಿಡ ನೆಡುವಂತೆ ಸೂಚಿಸಲಾಗಿದೆ. ಅಲ್ಲದೆ ಪ್ರತಿ ಶಾಖೆಗಳ ವ್ಯಾಪ್ತಿ ಯಲ್ಲಿರುವ ಮಸೀದಿ, ಮದರಸಗಳ ಪರಿಸರವನ್ನು ಸ್ವಚ್ಛಗೊಳಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. 

ಸಭೆಯ ಅಧ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಶಕ್ಷ ಸಯ್ಯದ್ ಅಮೀರ್ ತಂಙಳ್ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ತಾಜುದ್ದೀನ್ ರಹ್ಮಾನಿ ಉದ್ಘಾಟಿಸಿದರು. ಕೇಂದ್ರ ಸಮಿತಿ ಕಾರ್ಯದರ್ಶಿ ಖಾಸಿಂ ದಾರಿಮಿ, ಜಿಲ್ಲಾ ಕೋಶಾಧಿಕಾರಿ ಹನೀಫ್ ದೂಮಲಿಕೆ, ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಅಬ್ದುಲ್ ಅಝೀಝ್ ಮಲಿಕ್, ಅಬೂಸ್ವಾಲಿಹ್ ಪೈಝಿ, ಝಕರಿಯ್ಯ ಮುಸ್ಲಿಯಾರ್, ಕಾರ್ಯದರ್ಶಿ ಇಕ್ಬಾಲ್ ಬಾಳಿಲ, ಶೇರಿಫ್ ಕೆಲಿಂಜ, ಅಬ್ದುಲ್ ಖಾದರ್ ಕಣ್ಣೂರು, ಸಂಘಟನಾ ಕಾರ್ಯದರ್ಶಿ ರಿಯಾಝ್ ರಹ್ಮಾನಿ, ರಫೀಕ್ ಪೈಝಿ, ಪಿ.ಎ.ಝಕರಿಯ್ಶ ಮೌಲವಿ, ಸದಸ್ಯರಾದ ಇಸ್ಹಾಕ್ ಹಾಜಿ, ಮುಹಮ್ಮದ್ ಮಾಸ್ಟರ್, ರಶೀದ್ ರಹ್ಮಾನಿ, ಹಾರೀಶ್ ಕುದ್ರೋಳಿ, ಇಂತಿಯಾಝ್, ಜಾಬೀರ್ ಪೈಝಿ ಮೊದಲಾದವರು ಉಪಸ್ಥಿತರಿದ್ದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ ಸ್ವಾಗತಿಸಿದರು. ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ಆರೀಫ್ ಬಡಕಬೈಲ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News