×
Ad

ಉಡುಪಿ: ಮಸೀದಿಗಳಲ್ಲಿ ಸ್ವಚ್ಛತಾ ಕಾರ್ಯ, ನಿಯಮ ಅಳವಡಿಸಿ ಪ್ರಾರ್ಥನೆ ಸಲ್ಲಿಸಲು ತಯಾರಿ

Update: 2020-06-04 21:30 IST

ಉಡುಪಿ, ಜೂ.4: ಸೋಮವಾರದಿಂದ ರಾಜ್ಯದಲ್ಲಿ ಪ್ರಾರ್ಥನಾಲಯಗಳು ಪುನರಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಸ್ವಚ್ಛತೆ, ಸ್ಯಾನಿಟೈಸ್ ಕಾರ್ಯ ಪ್ರಾರಂಭಗೊಂಡಿವೆ. ಮಸೀದಿಗಳು ಲಾಕ್‌ಡೌನ್ ನಿಯಮದಂತೆ ನಮಾಝ್, ಪ್ರಾರ್ಥನೆ ನಿರ್ವಹಿಸಲು ಪೂರ್ವ ತಯಾರಿ ಮಾಡಿಕೊಳ್ಳುತ್ತಿವೆ.

ಉಡುಪಿಯ ನಾಯರ್‌ಕೆರೆಯಲ್ಲಿರುವ ಹಾಶಿಮಿ ಮಸೀದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಸಾಮಾಜಿಕ ಅಂತರ ಪಾಲಿಸಿ ನಮಾಝ್ ನಿರ್ವಹಿಸಲು ಮೀಟರ್ ಅಂತರದಲ್ಲಿ ಟೇಪ್ ಹಾಕುತ್ತಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಿಯೇ ಮಸೀದಿ ಪ್ರವೇಶಿಸಬೇಕು. ಸ್ಯಾನಿಟೈಸರ್‌ನಲ್ಲಿ ಕೈತೊಳೆದು ಒಳ ಪ್ರವೇಶಿಸಬೇಕು ಎಂದು ಮಸೀದಿ ಅಧ್ಯಕ್ಷ ಇಕ್ಬಾಲ್ ಮನ್ನಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News