ನಿಮ್ಮ ಜೀವಗಳಿಗೆ, ನಿಮ್ಮ ಕನಸುಗಳಿಗೆ ಬೆಲೆಯಿದೆ: ಯುವ ಪ್ರತಿಭಟನಕಾರರಿಗೆ ಒಬಾಮ ಸಂದೇಶ

Update: 2020-06-04 16:56 GMT

ವಾಶಿಂಗ್ಟನ್, ಜೂ. 4: ಜನಾಂಗೀಯ ಸಮಾನತೆ ಕೋರಿ ಅಮೆರಿಕನ್ನರು ನಡೆಸುತ್ತಿರುವ ಪ್ರತಿಭಟನೆಗಳಿಗೆ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಬುಧವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಪೊಲೀಸ್ ಕಸ್ಟಡಿಯಲ್ಲಿ ಕರಿಯ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವುದನ್ನು ಪ್ರತಿಭಟಿಸಿ ನಡೆಯುತ್ತಿರುವ ಪ್ರತಿಭಟನೆಗಳು ರಾಷ್ಟ್ರವ್ಯಾಪಿ ಸುಧಾರಣೆಗಳಿಗೆ ಅಡಿಪಾಯವಾಗಬಹುದು ಎಂದು ಅವರು ಹೇಳಿದ್ದಾರೆ.

ಬಲ ಪ್ರಯೋಗಕ್ಕೆ ಸಂಬಂಧಿಸಿದ ನೀತಿಗಳನ್ನು ಮರುಪರಿಶೀಲಿಸುವಂತೆ ಅವರು ವೀಡಿಯೊ ಹೇಳಿಕೆಯೊಂದರಲ್ಲಿ ಅವರು ರಾಜ್ಯ ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ವೀಡಿಯೊ ಸಂದೇಶದಲ್ಲಿ ಯುವ ಕರಿಯ ಪುರುಷರು ಮತ್ತು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವ ಜನಾಂಗವು ಅಗಾಧ ಪ್ರಮಾಣದ ಹಿಂಸೆಯನ್ನು ನೋಡಿದೆ ಎಂದರು.

“ನಿಮಗೆ ಬೆಲೆಯಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ. ನಿಮ್ಮ ಜೀವಗಳಿಗೆ ಬೆಲೆಯಿದೆ. ನಿಮ್ಮ ಕನಸುಗಳಿಗೆ ಬೆಲೆಯಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News