ಕೊರೋನ ವೈರಸ್ ಲಸಿಕೆಯು ಜನರ ಲಸಿಕೆಯಾಗಬೇಕು: ಆಂಟೋನಿಯೊ ಗುಟೆರಸ್ ಕರೆ

Update: 2020-06-05 16:52 GMT

ಲಂಡನ್, ಜೂ. 5: ನೂತನ-ಕೊರೋನ ವೈರಸ್‌ಗೆ ಕಂಡುಹಿಡಿಯಲಾಗುವ ಲಸಿಕೆಯು ಜಗತ್ತಿನಾದ್ಯಂತ ಎಲ್ಲರಿಗೂ ಸಿಗಬೇಕಾಗಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಗುರುವಾರ ಹೇಳಿದ್ದಾರೆ.

ನೂತನ ಲಸಿಕೆಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ನಿಧಿ ಸಂಗ್ರಹಿಸಲು ಬ್ರಿಟನ್ ಏರ್ಪಡಿಸಿದ ಅಂತರ್‌ರಾಷ್ಟ್ರೀಯ ವೀಡಿಯೊ ಕಾನ್ಫರೆನ್ಸ್ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಾವೇಶವು ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಸ್ಥಗಿತಗೊಂಡಿರುವ ರೋಗನಿರೋಧಕತೆ ಕಾರ್ಯಕ್ರಮಗಳಿಗಾಗಿ 7.4 ಬಿಲಿಯ ಡಾಲರ್ (ಸುಮಾರು 56,000 ಕೋಟಿ ರೂಪಾಯಿ) ನಿಧಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ ಹಾಗೂ ಸಂಭಾವ್ಯ ಕೋವಿಡ್-19 ಲಸಿಕೆಗಳ ಅಭಿವೃದ್ಧಿಗಾಗಿ ನೂತನ ನಿಧಿ ಸಂಗ್ರಹ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ.

ಕೋವಿಡ್-19ರ ಸಂಭಾವ್ಯ ಲಸಿಕೆಯನ್ನು ಜನರ ಲಸಿಕೆ ಎಂಬುದಾಗಿ ಪರಿಗಣಿಸಬೇಕು ಹಾಗೂ ಜಾಗತಿಕ ಸಾರ್ವಜನಿಕರ ಕಲ್ಯಾಣಕ್ಕಾಗಿ ಬಳಸಬೇಕು. ಹೆಚ್ಚೆಚ್ಚು ಜಾಗತಿಕ ನಾಯಕರು ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ವೀಡಿಯೊ ಸಂದೇಶವೊಂದರಲ್ಲಿ ಗುಟೆರಸ್ ಹೇಳಿದರು.

50ಕ್ಕಿಂತಲೂ ಅಧಿಕ ದೇಶಗಳು ಹಾಗೂ ಬಿಲ್ ಗೇಟ್ಸ್‌ರಂಥ ದಾನಿ ಉದ್ಯಮಿಗಳು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News