5 ವರ್ಷದ ಬಾಲಕನ ಸಾವು: ಅಮೆರಿಕ ನಂತರ ಬ್ರೆಝಿಲ್ ‍ನಲ್ಲಿ ವರ್ಣಭೇದ ನೀತಿ ವಿರುದ್ಧ ಭಾರೀ ಪ್ರತಿಭಟನೆ

Update: 2020-06-07 11:47 GMT

ಹೊಸದಿಲ್ಲಿ: ಮಿಗೆಲ್ ಡಿಸಿಲ್ವಾ ಎಂಬ ಐದು ವರ್ಷದ ಬಾಲಕನ ಸಾವು ಬ್ರೆಝಿಲ್ ನ ರೆಸೈಫ್‍ನಲ್ಲಿ ವರ್ಣಭೇದ ನೀತಿ ವಿರುದ್ಧದ ಪ್ರತಿಭಟನೆಗೆ ಕಾರಣವಾಗಿದೆ.

ಬಾಲಕ ಅಪಾರ್ಟ್‍ಮೆಂಟ್‍ನ ಮೇಲಿನ ಮಹಡಿಯಿಂದ ಬಿದ್ದಿರುವುದು ಕಟ್ಟಡದ ಭದ್ರತಾ ವಿಭಾಗದ ವಿಡಿಯೊ ದೃಶ್ಯಾವಳಿಯಲ್ಲಿ ಕಾಣಿಸುತ್ತಿದೆ. ಅಲ್ಲಿ ಬಾಲಕನ ತಾಯಿ ಮನೆಕೆಲಸಕ್ಕಿದ್ದರು. ಮಗುವನ್ನು ತಾಯಿಯ ಉದ್ಯೋಗದಾತರ ಸುಪರ್ದಿಯಲ್ಲಿ ಬಿಡಲಾಗಿತ್ತು ಎನ್ನಲಾಗಿದೆ.

ಕೋವಿಡ್-19 ಸಾಂಕ್ರಾಮಿಕ ಕಾರಣದಿಂದ ಶಾಲೆ ಮುಚ್ಚಿದ ಹಿನ್ನೆಲೆಯಲ್ಲಿ ಬಾಲಕ ತಾಯಿಯ ಜತೆ ಕೆಲಸದ ಸ್ಥಳಕ್ಕೆ ಬಂದಿದ್ದ. ಉದ್ಯೋಗದಾತರ ಮನೆಯ ನಾಯಿಯನ್ನು ವಾಯುವಿಹಾರಕ್ಕೆ ಕರೆದೊಯ್ಯುವ ವೇಳೆ ಮಗನನ್ನು ತಾಯಿ ಅಪಾರ್ಟ್ ಮೆಂಟ್ ನಲ್ಲಿ ಬಿಟ್ಟು ಹೋಗಿದ್ದರು ಎಂದು ವರದಿಗಳು ಹೇಳಿವೆ. ಅಪಾರ್ಟ್ ಮೆಂಟ್ ನಲ್ಲಿದ್ದ ಮತ್ತೊಬ್ಬ ಮಹಿಳೆ ಕಟ್ಟಡದ ಲಿಫ್ಟ್‍ನ ಗುಂಡಿ ಅದುಮಿ ಬಾಲಕನನ್ನು ತುತ್ತತುದಿಯ ಮಹಡಿಗೆ ಕಳುಹಿಸಿದ್ದು ದೃಶ್ಯಾವಳಿಯಲ್ಲಿ ಕಂಡುಬರುತ್ತಿದೆ. ಬಾಲಕ ಲಿಫ್ಟ್‍ನಿಂದ ಇಳಿದು ಬಾಲ್ಕನಿಯ ರೇಲಿಂಗ್ ಏರುತ್ತಿದ್ದಾಗ ಸಮತೋಲನ ತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಈ ಘಟನೆಯ ಬೆನ್ನಲ್ಲೇ ಪ್ರತಿಭಟನೆ ಭುಗಿಲೆದ್ದಿದ್ದು, ಬೀದಿ ಬೀದಿಗಳಲ್ಲಿ “ಬ್ಲ್ಯಾಕ್ ಲೈವ್ಸ್ ಮ್ಯಾಟರ್”ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News