ಉಡುಪಿ: ನಿರುಪಯುಕ್ತ ಸಾಮಗ್ರಿಗಳ ಬಹಿರಂಗ ಹರಾಜು
Update: 2020-06-07 17:45 IST
ಉಡುಪಿ ಜೂ.7: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿನ ನಿರುಪಯುಕ್ತ ಸಾಮಗ್ರಿಗಳನ್ನು ಜೂ.9ರಂದು ಬೆಳಗ್ಗೆ 11 ಗಂಟೆಗೆ ಕಚೇರಿಯ ಮುಂಭಾಗದಲ್ಲಿ ಗುಪ್ತ ಟೆಂಡರ್ ಮತ್ತು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತದೆ.
ಭಾಗವಹಿಸುವ ಟೆಂಡರ್‌ದಾರರು, ಕಡ್ಡಾಯವಾಗಿ ಜಿ.ಎಸ್.ಟಿ ಹೊಂದಿರ ಬೇಕು. ಗುಪ್ತ ಟೆಂಡರ್ ಹಾಗೂ ಬಹಿರಂಗ ಹರಾಜಿಗೆ ಪ್ರತ್ಯೇಕವಾಗಿ 10000 ರೂ. ಭದ್ರತಾ ಠೇವಣಿಯನ್ನು ನಗದಾಗಿ ಪಾವತಿಸಬೇಕು ಎಂದು ಪ್ರಕಟಣೆ ತಿಳಿಸಿದೆ.