×
Ad

ಜೂ.30ರವರೆಗೆ ಮೂಳೂರು ಮಸೀದಿ ತೆರೆಯದಿರಲು ತೀರ್ಮಾನ

Update: 2020-06-07 17:46 IST

ಕಾಪು, ಜೂ.7: ಉಡುಪಿ ಜಿಲ್ಲಾ ಕೇಂದ್ರ ಮಸೀದಿಯಾಗಿರುವ ಮುಳೂರು ಜುಮಾ ಮಸೀದಿಯನ್ನು ಜೂ.30ರವರೆಗೆ ತೆರೆಯದಿರಲು ಇಂದು ನಡೆದ ಕಮಿಟಿಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.

ಮಸೀದಿ ಅಧ್ಯಕ್ಷ ಎಂ.ಎಚ್.ಬಿ.ಮುಹಮ್ಮದ್ ಅಧ್ಯಕ್ಷತೆಯಲ್ಲಿ ಕರೆದ ತುರ್ತು ಸಭೆಯಲ್ಲಿ ಮಸೀದಿ ತೆರೆಯುವ ಕುರಿತ ಸಾಧಕ ಬಾಧಕಗಳ ಚರ್ಚೆ ನಡೆಸಿ ಈ ತೀರ್ಮಾನವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು. ಜು.1 ರಂದು ಮತ್ತೊಮ್ಮೆ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News