ಉಡುಪಿ: ಮಸೀದಿ ಪುನಾರಂಭಿಸುವ ಕುರಿತು ಜೂ. 8ರಂದು ಸಭೆ
Update: 2020-06-07 19:26 IST
ಉಡುಪಿ, ಜೂ. 7: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಮುಚ್ಚಲ್ಪಟ್ಟ ಮಸೀದಿಗಳನ್ನು ಜೂ.8ರಿಂದ ಪುನಾರಂಭಿಸುವಂತೆ ಸರಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಜೂ.8ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಜಾಮೀಯ ಮಸೀದಿಯಲ್ಲಿ ಸಭೆಯನ್ನು ಕರೆಯಲಾಗಿದೆ.
ಈ ಸಂಬಂಧ ಜೂ.6ರಂದು ನೇಜಾರು ಮಸೀದಿಯಲ್ಲಿ ನಡೆದ ಸಮುದಾಯದ ಪ್ರಮುಖ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಈ ಸಭೆ ಯನ್ನು ಕರೆಯಲಾಗಿದೆ. ಇದರಲ್ಲಿ ಜಿಲ್ಲೆಯ ಮಸೀದಿಗಳ ಪ್ರಮುಖರು ಭಾಗವಹಿಸಲಿರುವರು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.