×
Ad

ಮಂಗಳೂರು: ಜುಗಾರಿ ಅಡ್ಡೆಗೆ ದಾಳಿ; 14 ಮಂದಿ ಸೆರೆ

Update: 2020-06-07 20:50 IST

ಮಂಗಳೂರು, ಜೂ.7: ನಗರದ ಆನೆಗುಂಡಿ 2ನೇ ತಿರುವಿನ ಕ್ರಿಸ್ಟಲ್ ಹೋಮ್ ಗೆಸ್ಟ್ ಹೌಸ್‌ನಲ್ಲಿ ಇಸ್ಪೀಟ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ಪ್ರಮುಖ ಆರೋಪಿ ಪೋರ್ತ್‌ಮೈಲ್‌ನ ಚೇತನ್ ಕುಮಾರ್ ಸಹಿತ 14 ಮಂದಿಯನ್ನು ಬಂಧಿಸಿದ್ದಾರೆ.

ಕೂಳೂರು ಚೇತನ್‌ ಕುಮಾರ್, ಉಡುಪಿಯ ಕಲ್ಸಂಗದ ನಿಖಿಲ್, ಬರ್ಕೆಯ ಚೇತನ್, ಅಶೋಕನಗರದ ಧೀರಜ್, ದಂಬೇಲ್‌ನ ಸಚಿನ್, ಚೊಕ್ಕಬೆಟ್ಟುವಿನ ಸುರೇಂದ್ರ ಭಂಡಾರಿ, ಕಾನಕತ್ಲ ಅನ್ವರ್, ಬೆಂಗರೆ ಝುಬೈರ್, ಕಾವೂರಿನ ನಾಗೇಶ್ ಶ್ರೀಯಾನ್, ಕುಳಾಯಿ ಭರತೇಶ್ ಶ್ರೀಯಾನ್, ಜೋಕಟ್ಟೆಯ ಇಮ್ರಾನ್, ಕೊಣಾಜೆಯ ಅನ್ವರ್, ಬಂಗ್ರ ಕೂಳೂರಿನ ಹೇಮಂತ್, ಕುಂಜತ್ತಬೈಲ್‌ನ ಸತೀಶ್ ಪೂಜಾರಿ ಬಂಧಿತ ಆರೋಪಿಗಳು.

ಆಟಕ್ಕೆ ಬಳಸಿದ 1,75,200 ರೂ., 18 ಮೊಬೈಲ್, ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ಎಸ್‌ಐ ಕಬ್ಬಾಳ್ ರಾಜ್ ಅವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಮುಂದಿನ ತನಿಖೆಗೆ ಆರೋಪಿಗಳನ್ನು ಹಾಗೂ ವಶಕ್ಕೆ ಪಡೆಯಲಾದ ಸೊತ್ತುಗಳನ್ನು ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News