×
Ad

​ಪಾಸಿಟಿವ್ ಪ್ರಕರಣ: ಉಡುಪಿಯಲ್ಲಿ ಮತ್ತೆ 133 ಪ್ರದೇಶ ಸೀಲ್‌ಡೌನ್

Update: 2020-06-07 20:54 IST

ಉಡುಪಿ, ಜೂ.7: ಕಳೆದ ಎರಡು ದಿನಗಳ ಕೊರೋನ ಪಾಸಿಟಿವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಇಂದು ಒಟ್ಟು 133 ಕಡೆಗಳಲ್ಲಿ ಇಂದು ಸೀಲ್‌ಡೌನ್ ಮಾಡಿರುವ ಬಗ್ಗೆ ವರದಿಯಾಗಿದೆ.

ಬೈಂದೂರು ತಾಲೂಕು ಒಂದರಲ್ಲೇ ಇಂದು ಒಟ್ಟು 124 ಕಡೆಗಳಲ್ಲಿ ಕಂಟೇನ್‌ಮೆಂಟ್ ವಲಯವನ್ನು ಘೋಷಿಸಿ ಸೀಲ್‌ಡೌನ್ ಮಾಡಲಾಗಿದೆ. ಈ ಮೂಲಕ ತಾಲೂಕಿನ ಒಟ್ಟು 261 ಪ್ರದೇಶಗಳಲ್ಲಿ ಸೀಲ್‌ಡೌನ್ ಮಾಡಿ ರುವ ಬಗ್ಗೆ ತಾಲೂಕು ಕಚೇರಿ ಮೂಲಗಳು ತಿಳಿಸಿವೆ. ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಪಂ ವ್ಯಾಪ್ತಿಯ ಶಿರೂರು ಗ್ರಾಮದ ಎರಡು ಮತ್ತು ಮಣಿಪುರ ಗ್ರಾಮದ ಒಂದು ಸೇರಿದಂತೆ ಒಟ್ಟು ಮೂರು ಪ್ರದೇಶ ಗಳನ್ನು ಸೀಲ್‌ಡೌನ್ ಮಾಡಿ ಕಂಟೇನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ.

ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಕಾರಂತೆಕೇರಿ, ಸಂತೋಷ ನಗರ, ಮಕ್ಕಿಮನೆ, ಕನ್ಯಾನ ಗ್ರಾಮದ ಕಬೈಲು, ತ್ರಾಸಿ ಗ್ರಾಮದ ದೇವಳಿ, ಗುಲ್ವಾಡಿ ಗ್ರಾಪಂ ಕಚೇರಿ ಸಮೀಪದ ಪ್ರದೇಶ ಸಹಿತ ಒಟ್ಟು ಆರು ಕಡೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ.

ಉಳಿದಂತೆ ಬ್ರಹ್ಮಾವರ, ಕಾಪು, ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ ಇಂದು ಯಾವುದೇ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿಲ್ಲ ಎಂದು ಆಯಾ ತಾಲೂಕಿನ ತಹಶೀಲ್ದಾರರು ಮಾಹಿತಿ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 443 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News