×
Ad

ಇಂಡೋನೇಶ್ಯ: ಸೇನಾ ಹೆಲಿಕಾಪ್ಟರ್ ಪತನ; 4 ಸೈನಿಕರ ಸಾವು

Update: 2020-06-07 21:05 IST

ಜಕಾರ್ತ, ಜೂ. 7: ಇಂಡೋನೇಶ್ಯದ ಜಾವಾ ದ್ವೀಪದಲ್ಲಿ ಶನಿವಾರ ನಡೆದ ತರಬೇತಿಯ ವೇಳೆ ಸೇನಾ ಹೆಲಿಕಾಪ್ಟರೊಂದು ಪತನಗೊಂಡಾಗ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸೈನಿಕರಿಗೆ ಎಂಐ-17 ಹೆಲಿಕಾಪ್ಟರ್‌ನಲ್ಲಿ ಹಾರಾಟ ತರಬೇತಿ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಪತನಗೊಂಡಿತು ಹಾಗೂ ಬಳಿಕ ಅದಕ್ಕೆ ಬೆಂಕಿ ಹೊತ್ತಿಕೊಂಡಿತು.

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಹೆಲಿಕಾಪ್ಟರ್ ಪತನಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News