ಕೊಕ್ಕಡ: ಗ್ರೀನ್ ಗೈಸ್ ಬದ್ರಿಯಾ ನಗರ, ಬ್ಲಡ್ ಹೆಲ್ಪ್ ಲೈನ್ ವತಿಯಿಂದ ರಕ್ತದಾನ ಶಿಬಿರ

Update: 2020-06-07 16:39 GMT

ನೆಲ್ಯಾಡಿ : ಗ್ರೀನ್ ಗೈಸ್ ಬದ್ರಿಯಾ ನಗರ ಕೊಕ್ಕಡ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ರವಿವಾರ ಕೊಕ್ಕಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕೊರೋನಾ ಭೀತಿಯ ನಡುವೆಯೂ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 54 ಮಂದಿ ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದರು.

ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕೊಕ್ಕಡ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಷರೀಫ್ ಬದ್ರಿಯಾ ನಗರ, ಹೇಮಂತ್ ಕುಮಾರ್ ಜಿ.ಎನ್, ಡಾ. ಬಿ ಮೋಹನ್ ದಾಸ್ ಗೌಡ, ಟೀಮ್ ಚಕ್ರವರ್ತಿ ಕರ್ವೆಲ್ ಇದರ ಅಧ್ಯಕ್ಷ ಫಾರೂಕ್ ಪೆರ್ನೆ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕರಾದ ಅಶ್ರಫ್ ಅರಬಿ ಕಲ್ಲಡ್ಕ, ಕೊಕ್ಕಡ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಮನೋರಮ, ಯೂಸುಫ್ ಬೈಲಂಗಡಿ. ಉಮೇಶ್ ಸಪ್ತಗಿರಿ,ಲಕ್ಷ್ಮೀ ನಾರಾಯಣ, ಮ್ಯಾಕ್ಸಿಮ್‌ ಲೋಬೊ ಕೊಕ್ಕಡ, ಅಶ್ರಫ್ ಚಕ್ರವರ್ತಿ ಕರ್ವೆಲ್, ಇಸ್ಮಾಯಿಲ್ ಜೋಡುಮಾರ್ಗ, ಹರೀಶ್.ಪಿ. ಹಾಗು ಇತರರು ಉಪಸ್ಥಿತರಿದ್ದರು.

ಖಲಂದರ್ ಎಂಎಚ್ ಸ್ವಾಗತಿಸಿದರೆ, ಅನ್ಸಾರ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News