ಮಂಗಳೂರು : 'ಟೀಮ್ ಬಿ-ಹ್ಯೂಮನ್' ವತಿಯಿಂದ ವಲಸಿಗರಿಗೆ ಬಟ್ಟೆಬರೆ, ಪಾದರಕ್ಷೆ ವಿತರಣೆ
Update: 2020-06-08 18:52 IST
ಮಂಗಳೂರು : ಕೊರೋನ ವೈರಸ್ ಭೀತಿಯ ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೊಳಗಾದ ವಲಸೆ ಕಾರ್ಮಿಕರಿಗೆ ಮಂಗಳೂರಿನ ಸಮಾಜ ಸೇವಾ ಸಂಸ್ಥೆ 'ಟೀಮ್ ಬಿ-ಹ್ಯೂಮನ್' ವತಿಯಿಂದ ವಲಸೆ ಕಾರ್ಮಿಕರಿಗೆ ತಾವು ಇರುವ ಸ್ಥಳಗಳಿಗೆ ತೆರಳಿ ಪ್ರತಿದಿನ ಆಹಾರ ಪೊಟ್ಟಣ, ಅರ್ಹ ಕುಟುಂಬಗಳಿಗೆ ಕೋವಿಡ್ ಕಿಟ್ ಮತ್ತು ರಮಝಾನ್ ಕಿಟ್ ವಿತರಿಸಿ ಸಾವಿರಾರು ಜನರ ಹಸಿವು ನೀಗಿಸಿ ನೆರವಾಗಿದ್ದು, ಅದಲ್ಲದೆ ಹಲವಾರು ವೈದ್ಯಕೀಯ ನೆರವು ನೀಡುತ್ತಾ ಬಂದಿದೆ.
ದಿನಗಳ ಹಿಂದೆ ಕೆಲವು ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಿದರೆ, ಇನ್ನೂ ಹಲವರು ತಮ್ಮ ಊರುಗಳಿಗೆ ಹೋಗದೆ ಇಲ್ಲಿಯೇ ಸಂಕಷ್ಟದಲ್ಲಿದ್ದಾರೆ. ಇಂತಹ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ತಂಗಿರುವ ಸ್ಥಳಗಳಿಗೆ ತೆರಳಿ 'ಟೀಮ್ ಬಿ-ಹ್ಯೂಮನ್' ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಧರಿಸಲು ಬೇಕಾಗುವಂತಹ ವಸ್ತ್ರಗಳು ಮತ್ತು ಪಾದರಕ್ಷೆಗಳನ್ನು ವಿತರಿಸಿತು.