×
Ad

ಉಡುಪಿ ಜಿಲ್ಲಾ ಬಿಜೆಪಿ ವಿವಿಧ ಮೋರ್ಚಾ ಅಧ್ಯಕ್ಷರ ಪಟ್ಟಿ ಬಿಡುಗಡೆ

Update: 2020-06-08 21:10 IST

ಉಡುಪಿ, ಜೂ.8: ಜಿಲ್ಲೆಯ ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಪ್ರಕೋಷ್ಠಗಳ ಸಂಚಾಲಕರ ಪಟ್ಟಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಬಿಡುಗಡೆಗೊಳಿಸಿದ್ದಾರೆ.

ಇದೇ ವೇಳೆ ಪಕ್ಷದ ಜಿಲ್ಲಾ ಕೋಶಾಧಿಕಾರಿಯಾಗಿ ಪ್ರವೀಣ್‌ಕುಮಾರ್ ಶೆಟ್ಟಿ ಕಪ್ಪೆಟ್ಟು ಅವರನ್ನು ನೇಮಕ ಮಾಡಲಾಗಿದೆ. ವಿವಿಧ ಮೋರ್ಚಾಗಳ ಅಧ್ಯಕ್ಷರ ವಿವರ ಹೀಗಿದೆ.

ಯುವ ಮೋರ್ಚಾ ಅಧ್ಯಕ್ಷರು- ವಿಖ್ಯಾತ್ ಶೆಟ್ಟಿ ಕಾರ್ಕಳ, ರೈತ ಮೋರ್ಚಾ ಅಧ್ಯಕ್ಷ-ಪ್ರವೀಣ್‌ಕುಮಾರ್ ಗುರ್ಮೆ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರು- ಸುರೇಂದ್ರ ಪಣಿಯೂರು, ಮಹಿಳಾ ಮೋರ್ಚಾ ಅಧ್ಯಕ್ಷರು- ವೀಣಾ ಎಸ್.ಶೆಟ್ಟಿ, ಎಸ್‌ಸಿ ಮೋರ್ಚಾ ಅಧ್ಯಕ್ಷರು-ಗೋಪಾಲ ಕಳಂಜೆ ಕುಂದಾಪುರ, ಎಸ್‌ಟಿ ಮೋರ್ಚಾ ಅಧ್ಯಕ್ಷರು-ನಿತ್ಯಾನಂದ ನಾಯ್ಕಾ ಚಾಂತಾರು, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರು- ದಾವೂದ್ ಅಬೂಬಕ್ಕರ್ ಉಡುಪಿ.

ವಿವಿಧ ಪ್ರಕೋಷ್ಠಗಳ ಸಂಚಾಲಕರಾಗಿ ರಾಜೀವ ಕುಲಾಲ್ (ಪಂಚಾಯತ್ ರಾಜ್ ಪ್ರಕೋಷ್ಠ), ಕೈಲಾಡಿ ಬಾಲಕೃಷ್ಣ ಶೆಟ್ಟಿ (ಕಾನೂನು ಮತ್ತು ಸಂಸದೀಯ ಪ್ರಕೋಷ್ಠ), ಕೆ.ಮುರಳೀಧರ ಪೈ ಕಟಪಾಡಿ (ಸಹಕಾರಿ ಪ್ರಕೋಷ್ಠ), ರಘುವೀರ್ ಶೆಣೈ (ಪ್ರಶಿಕ್ಷಣ ಪ್ರಕೋಷ್ಠ), ವಿನೋದ್ ನಾಯಕ್ (ಅಭಿವೃದ್ಧಿ ಮಾಹಿತಿ ಪ್ರಕೋಷ್ಠ), ದಿವಾಕರ ಶೆಟ್ಟಿ ಕೆ. (ಆರ್ಥಿಕ ಪ್ರಕೋಷ್ಠ).

ಅಕ್ಷಯ ಶೆಟ್ಟಿ (ಮಾಹಿತಿ ತಂತ್ರಜ್ಞಾನ ಪ್ರಕೋಷ್ಠ), ರಮಾಕಾಂತ ಕಾಮತ್ ಸಂತೆಕಟ್ಟೆ (ವ್ಯಾಪಾರಿ ಪ್ರಕೋಷ್ಠ), ಚಿಟ್ಟೆ ರಾಜಗೋಪಾಲ ಹೆಗ್ಡೆ (ಸಂವಹನ ಪ್ರಕೋಷ್ಠ), ಕೆ.ಜಿ.ಸುರೇಂದ್ರ (ಇಂಜಿನಿಯರ್ಸ್‌ ಪ್ರಕೋಷ್ಠ), ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು (ಮಾಧ್ಯಮ ವಿಭಾಗ ಪ್ರಕೋಷ್ಠ), ಶರತ್‌ಕುಮಾರ್ ಬೈಲಕೆರೆ (ಮೀನುಗಾರರ ಪ್ರಕೋಷ್ಠ), ಗಣೇಶ ಬ್ರಹ್ಮಾವರ (ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ), ಚಂದ್ರಶೇಖರ ಪ್ರಭು (ಸಾಮಾಜಿಕ ಜಾಲತಾಣ), ರತ್ನಾಕರ ಶೆಟ್ಟಿಗಾರ್ ಇಂದ್ರಾಳಿ (ನೇಕಾರರ ಪ್ರಕೋಷ್ಠ) ಇವರನ್ನು ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News