×
Ad

ಜೂನ್ ಅಂತ್ಯದವರೆಗೆ ಶುಕ್ರವಾರದ ಜುಮಾ ನಮಾಝ್ ನಿರ್ವಹಿಸದಿರಲು ಮಂಜನಾಡಿ ಕೇಂದ್ರ ಜುಮಾ ಮಸೀದಿ ತೀರ್ಮಾನ

Update: 2020-06-09 16:15 IST

ಮಂಗಳೂರು, ಜೂ.9: ಸರಕಾರದ ಆದೇಶ ಪಾಲಿಸಿಕೊಂಡು ಮಸೀದಿಯನ್ನು ತೆರೆದು ದಿನದ ಐದು ಬಾರಿ ಸಾಮೂಹಿಕ ನಮಾಝ್ ಮಾತ್ರ ನಿರ್ವಹಿಸಿ ಮಸೀದಿ ಮುಚ್ಚಲು ಮಂಜನಾಡಿ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ನಿರ್ಧರಿಸಿದೆ.

ಜುಮಾ ನಮಾಝ್‌ಗೆ ಅವಕಾಶ ಇದ್ದರೂ ಜಿಲ್ಲೆಯಲ್ಲಿ ಕೊರೋನ ಹಾವಳಿಯ ತೀವ್ರತೆಯಿಂದ ಸುರಕ್ಷತಾ ಕ್ರಮಗಳೊಂದಿಗೆ ಜುಮಾ ನಮಾಝ್ ನಿರ್ವಹಿಸಲು ಸಾಧ್ಯವಿಲ್ಲದ ಕಾರಣ ಶುಕ್ರವಾರದ ಜುಮಾ ನಮಾಝ್ ಜೂ.30ರವರೆಗೆ ನಿರ್ವಹಿಸದಿರಲು ತೀರ್ಮಾನಿಸಲಾಗಿದೆ. ದರ್ಗಾ ಝಿಯಾರತ್ ಸಂಪೂರ್ಣ ನಿಷೇಧಿಸಲಾಗಿದ್ದು, 10 ವರ್ಷದ ಮಕ್ಕಳು ಮತ್ತು 65 ವರ್ಷ ಪ್ರಾಯದವರಿಗೆ ಸಾಮೂಹಿಕ ನಮಾಝ್‌ನಲ್ಲಿ ಭಾಗವಹಿಸಲು ಅವಕಾಶ ಇಲ್ಲ. ಜುಮಾ ನಮಾಝ್‌ನ ಬಗ್ಗೆ ಜೂ. 30ರಂದು ಸಭೆ ಕರೆದು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಮಂಜನಾಡಿ ಕೇಂದ್ರ ಜುಮಾ ಮಸೀದಿ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News