ಪಿ.ಎಂ.ರಾಮಕೃಷ್ಣ ಆಚಾರ್ ನಿಧನ
Update: 2020-06-09 18:07 IST
ಉಡುಪಿ, ಜೂ.9: ಪುತ್ತೂರಿನ ಉದ್ಯಮಿ ಪಿ.ಎಂ.ರಾಮಕೃಷ್ಣ ಆಚಾರ್ (91) ಮಂಗಳವಾರ ನಿಧನರಾದರು.
ಉಡುಪಿ ಎಲ್‌ಐಸಿ ಉದ್ಯೋಗಿಯಾಗಿ ನಿವೃತ್ತರಾಗಿದ್ದ ಇವರು ಪ್ರಗತಿಪರ ಕೃಷಿಕರೂ ಆಗಿದ್ದರು. ನಿಟ್ಟೂರು ಎಜುಕೇಷನಲ್ ಸೊಸೈಟಿಯ ಸ್ಥಾಪಕ ಸದಸ್ಯರಾದ ಇವರು ದೀರ್ಘಕಾಲ ಕೋಶಾಧಿಕಾರಿಯಾಗಿ ಬಳಿಕ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪುತ್ತೂರಿನ ಧಾನ್ಯಲಕ್ಷ್ಮೀ ರೈಸ್‌ಮಿಲ್‌ನ ಸಂಸ್ಥಾಪಕರಾದ ರಾಮಕೃಷ್ಣ ಆಚಾರ್, ಉಡುಪಿಯ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕತಿಕ ಚಟುವಟಿಕೆಗಳಿಗೆ ಉದಾರ ನೆರವನ್ನು ನೀಡುತಿದ್ದರು. ಇವರು ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಹಾಗು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ನಿಟ್ಟೂರು ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಹಾಗೂ ನಿಟ್ಟೂರು ಹೈಸ್ಕೂಲ್‌ನ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.