ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ : ಕಾರ್ಯಕಾರಿ ಸಭೆ, ಪದಾಧಿಕಾರಿಗಳ ಆಯ್ಕೆ
ಮಂಗಳೂರು : ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಸಮಿತಿಯ ಸದಸ್ಯರುಗಳಿಗೆ ಆದೇಶ ಪತ್ರ ವಿತರಣೆ ಮತ್ತು ತಾಲೂಕು ಸಮಿತಿಯ ರಚನೆ, ಮುಂದಿನ ಯೋಜನೆ, ಹಾಗೂ ನೇತ್ರಾವತಿ ವೀರರಿಗೆ ಆತ್ಮ ರಕ್ಷಕ ಕವಚ ವಿತರಣಾ ಕಾರ್ಯಕ್ರಮದ ಬಗ್ಗೆ ಕಾರ್ಯಕಾರಿ ಸಭೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಡಿದ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ನಮ್ಮ ಸಂಘಟನೆಯು ಬಡವರ, ದೀನದಲಿತರಿಗೆ ಆಶಾಕಿರಣವಾಗಿ ಸೇವೆ ಮಾಡುತ್ತಿದ್ದು, ನಾವು ನೇತ್ರಾವತಿ ವೀರರಿಗೆ ಆತ್ಮರಕ್ಷಣಾ ಕವಚ ನೀಡುವುದೆಂದು ಭರವಸೆ ಕೊಟ್ಟಿದ್ದೆವು, ಅದನ್ನು ನೆರವೇರಿಸುವ ಸಲುವಾಗಿ ಜಾಕೆಟ್ ನೀಡಲು ಈ ಸಭೆಯಲ್ಲಿ ನಿರ್ಧರಿಸಿದ್ದೇವೆ, ಒಂದೆರಡು ದಿನಗಳಲ್ಲಿ ಕೊಟ್ಟ ಭರವಸೆಯಂತೆ ಜಾಕೆಟನ್ನು ನೀಡಲಿದ್ದೇವೆ ಮತ್ತು ನೂತನವಾಗಿ ಆಯ್ಕೆಯಾದ ಜಿಲ್ಲಾ ಪದಾಧಿಕಾರಿಗಳಿಗೆ ಆದೇಶಪತ್ರವನ್ನು ನೀಡಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ್ದೇವೆ, ಮುಂದಿನ ದಿನಗಳಲ್ಲಿ 8 ವಿಧಾನ ಸಭಾ ಕ್ಷೇತ್ರಗಳಲ್ಲೂ ತಾಲೂಕು ಮಟ್ಟದ ಕಮಿಟಿಯನ್ನು ರಚನೆ ಮಾಡಲಿದ್ದೇವೆ ಎಂದರು.
ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಜಿಲ್ಲಾ ಉಪಾಧ್ಯಕ್ಷ ಮುನೀರ್ ಅಸೈಗೋಳಿ ಮಾತನಾಡಿ, ಹಝ್ರತ್ ಟಿಪ್ಪು ಸುಲ್ತಾನ್ ನಮ್ಮ ದೇಶಕ್ಕಾಗಿ ತ್ಯಾಗ ಹೋರಾಟಗಳನ್ನು ಮಾಡಿದ್ದು ನಾವು ಮರೆಯುವಂತಿಲ್ಲ, ಅವರ ಆಶಯಗಳನ್ನು ನಮ್ಮ ಸಾಮಾಜಿಕ ಬದುಕಿನಲ್ಲಿ ಅಳವಡಿಸುತ್ತೇವೆ, ನಮ್ಮ ಸಂಘಟನೆಯು ಬಡವರ ದೀನದಲಿತರ ಒಳಿತಿಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಕೊರೋನ ಸಂದರ್ಭದಲ್ಲಿಯೂ ಎಲ್ಲಾ ಜಾತಿ, ಧರ್ಮದವರಿಗೂ ಆಹಾರ ಸಾಮಗ್ರಿಗಳನ್ನು ನೀಡಿದ್ದೇವೆ, ಇದಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೂ ಅಭಿನಂದನೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕರೀಂ ಅಳೇಕಲ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಅಳೇಕಲ ಅವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ಜಿಲ್ಲಾ ಗೌರವ ಅಧ್ಯಕ್ಷ ಡಿ.ಐ.ಅಬೂಬಕರ್ ಕೈರಂಗಳ ದಿಕ್ಸೂಚಿ ಬಾಷಣ ಮಾಡಿದರು.
ಉಪಾಧ್ಯಕ್ಷ ವಿಷ್ಣು ಮೂರ್ತಿ ಭಟ್, ಸಂಚಾಲಕರಾದ ಸಲೀಂ ಮೇಗಾ, ಕಾರ್ಯಕಾರಿ ಸದಸ್ಯರಾದ ಮೊಹಮ್ಮದ್ ಪರಪ್ಪು, ಇಸ್ಮಾಯಿಲ್ ಮುಬಶ್ಶಿರ್ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕೆ.ಐ.ಅಬ್ದುಲ್ ಅಝೀಝ್ ಝುಹ್ರಿ ಪುಣಚ ಕಾರ್ಯಕ್ರಮ ನಿರೂಪಿಸಿದರು . ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ಜಿಲ್ಲಾ ಮಾದ್ಯಮ ಕಾರ್ಯದರ್ಶಿ ಕೆ.ಎಂ ಅಶ್ರಫ್ ಸಖಾಫಿ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ನಿಸಾರ್ ಮಾರಿಪಳ್ಳ, ಸ್ವಾಗತಿಸಿದರು.