ಮತ್ತೊಮ್ಮೆ ದಾಖಲೆ ಸೃಷ್ಟಿಸಿದ ಕಾಂಚನ ಹೋಂಡಾ: ಜೂ.13ರವರೆಗೆ ವಾಹನ ಖರೀದಿಗೆ ಸುವರ್ಣಾವಕಾಶ
ಮಂಗಳೂರು, ಜೂ. 9: ವಾಹನ ಮಾರಾಟ ಮತ್ತು ಸೇವೆಯಲ್ಲಿ ಅನುಭವ ಹೊಂದಿರುವ ಹಾಗೂ ಕರಾವಳಿಯಾದ್ಯಂತ ಹಲವು ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಕಾಂಚನ ಮೋಟಾರ್ಸ್‌ನ ಅಂಗಸಂಸ್ಥೆಯಾದ ಕಾಂಚನ ಹೋಂಡಾ ಸಂಸ್ಥೆಯು ದ್ವಿಚಕ್ರ ವಾಹನ ವಿನಿಮಯ ಮತ್ತು ಮಾರಾಟದಲ್ಲಿ ಮತ್ತೊಮ್ಮೆ ದಾಖಲೆ ನಿರ್ಮಿಸಿದೆ. ಈ ಮೂಲಕ ನಿರೀಕ್ಷೆಗೂ ಮೀರಿದ ಜನಭರಿತ ಸ್ಪಂದನೆ ವ್ಯಕ್ತವಾಗಿದೆ.
ಕಾಂಚನ ಹೋಂಡಾದ ಎಲ್ಲ ಶೋರೂಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸೆಕೆಂಡ್ ಹ್ಯಾಂಡ್ ಡೀಲರ್‌ಗಳ ಉಪಸ್ಥಿತಿಯೊಂದಿಗೆ ಬೃಹತ್ ಸಾಲ ಮತ್ತು ವಿನಿಮಯ ಮೇಳವನ್ನು ಜೂ.8ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ.
ಗ್ರಾಹಕರು ಉತ್ತಮ ಬೆಲೆಯೊಂದಿಗೆ ತಮ್ಮ ವಾಹನಗಳನ್ನು ವಿನಿಮಯ ಮಾಡಿಕೊಂಡು ದಾಖಲೆಯ ಪ್ರಮಾಣದಲ್ಲಿ ಹೊಸ ದ್ವಿಚಕ್ರ ವಾಹನಗಳನ್ನು ಖರೀದಿಸಿದ್ದಾರೆ. ಪ್ರತಿ ವಾಹನಕ್ಕೆ ವಿನಿಮಯದ ಮೇಲೆ ಸುಮಾರು 5,000ದಿಂದ 10,000 ರೂಪಾಯಿಗೂ ಅಧಿಕ ಲಾಭ ಪಡೆದುಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಅತಿಹೆಚ್ಚು ವಾಹನಗಳ ಖರೀದಿಯ ಭರಾಟೆ ನಡೆದಿದೆ. ಕಡಿಮೆ ಅವಧಿಯಲ್ಲಿ ಸಂತೃಪ್ತ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ.
ಬೃಹತ್ ಸಾಲ ಮತ್ತು ವಿನಿಮಯ ಮೇಳ ಆರಂಭವಾದ ಜೂ.8ರಂದು ಒಂದೇ ದಿನದಲ್ಲಿ 119 ವಾಹನಗಳ ವಿನಿಮಯ ಪ್ರಕ್ರಿಯೆ ನಡೆಯಿತು. ವಿನಿಮಯದ ಲಾಭದೊಂದಿಗೆ ಸುಮಾರು 150ಕ್ಕೂ ಹೆಚ್ಚು ವಾಹನಗಳನ್ನು ಖರೀದಿಸಿ ಗ್ರಾಹಕರು ಮನೆಗೆ ಕೊಂಡೊಯ್ದಿದ್ದಾರೆ. ಗ್ರಾಹಕರಿಗೆ ಸಂತೃಪ್ತಿ ನೀಡುವುದೇ ಸಂಸ್ಥೆಯ ಆದ್ಯ ಕರ್ತವ್ಯವಾಗಿದೆ.
ಅತ್ಯುತ್ತಮ ಆಫರ್
ಹೊಸ ಹೋಂಡಾ ದ್ವಿಚಕ್ರ ವಾಹನ ಖರೀದಿಯ ಮೇಲೆ ಅತೀ ಕಡಿಮೆ ಮುಂಗಡ ಪಾವತಿ, ಅತೀ ಕಡಿಮೆ ಬಡ್ಡಿ ದರದಲ್ಲಿ ಸ್ಥಳದಲ್ಲೇ ಸಾಲ ಮಂಜೂರಾತಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ, ಮೆಗಾ ಮಾನ್ಸೂನ್ ಆಫರ್ ಪ್ರಯುಕ್ತ ಪ್ರತಿ ವಾಹನ ಖರೀದಿಯ ಮೇಲೆ ವಿಶೇಷ ರಿಯಾಯಿತಿಯೊಂದಿಗೆ ಹೋಂಡಾ ಝೀಲ್ ರೈನ್ ಕೋಟ್/ ಹೋಂಡಾ ಹೆಲ್ಮೆಟ್/ ಫುಲ್‌ಟ್ಯಾಂಕ್ ಪೆಟ್ರೋಲ್/ 15 ಲಕ್ಷ ರೈಡರ್ ಇನ್ಶೂರೆನ್ಸ್‌ನ್ನು ಸಂಸ್ಥೆ ನೀಡಲಿದೆ.
ಜೂ.13ರವರೆಗೆ ವಿಶೇಷ ಕೊಡುಗೆ
ಗ್ರಾಹಕರಿಗೆ ಕಾಂಚನ ಹೋಂಡಾ ಶಾಖೆಗಳಾದ ಮಂಗಳೂರಿನ ಕಂಕನಾಡಿ ಬೈಪಾಸ್, ಕಾವೂರು- ಶಾಂತಿನಗರ, ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ, ಬಿ.ಸಿ.ರೋಡ್-ಕೈಕಂಬ, ಸಿದ್ದಕಟ್ಟೆ-ಸಂಗಬೆಟ್ಟು, ಮಾಣಿ-ಬುಡೋಳಿ, ವಿಟ್ಲದ ಶೋರೂಂಗಳಲ್ಲಿ ಜೂ.13ರವರೆಗೆ ವಿಶೇಷ ಕೊಡುಗೆಗಳನ್ನು ಸಂಸ್ಥೆ ನೀಡಲಿದೆ.
ಈಗಾಗಲೇ ಹೋಂಡಾ ಸಂಸ್ಥೆಯಿಂದ ಹೊಸ ‘ಬಿಎಸ್6’ ತಂತ್ರಜ್ಞಾನದೊಂದಿಗೆ ಬಿಡುಗಡೆಯಾದ ಹೋಂಡಾ ಆಕ್ಟಿವಾ 125, ಆಕ್ಟಿವಾ 6 ಜಿ, ಡಿಯೋ, ಶೈನ್, ಎಸ್‌ಪಿ 125, ಯೂನಿಕಾರ್ನ್, ಸಿಡಿ 110 ಸಾಯ್ಲೆಂಟ್ ಸ್ಟಾಟ್‌ನಿಂದ ಪ್ರಶಂಸೆಗೆ ಪಾತ್ರವಾಗಿದೆ. ಹಾಗೆಯೇ ಶೇ.10ರಿಂದ 16ರವರೆಗೆ ಅಧಿಕ ಮೈಲೇಜ್ ಸಿಗಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
‘ಸುರಕ್ಷಿತ ಅಂತರ’ಕ್ಕಾಗಿ ದ್ವಿಚಕ್ರ ವಾಹನ ಖರೀದಿ
ಕೊರೋನ ಸೋಂಕು ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ನಡುವೆಯೇ ಎಲ್ಲರೂ ಸುರಕ್ಷಿತ ಅಂತರ ಕಾಪಾಡುವುದು ಇಂದಿನ ಅತ್ಯಂತ ತುರ್ತು ಅಗತ್ಯವಾಗಿದೆ. ಸುರಕ್ಷಿತ ಅಂತರಕ್ಕಾಗಿಯೇ ಪ್ರಸಕ್ತ ದಿನಮಾನಗಳಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಅಂದಹಾಗೆ ಈಗ ದ್ವಿಚಕ್ರ ವಾಹನ ಖರೀದಿಸುವುದು ಮೊದಲಿಗಿಂತಲೂ ಸುಲಭವಾಗಿದೆ. ಎಲ್ಲ ವರ್ಗಗಳ ಜನತೆಯು ಸಮರೋಪಾದಿಯಲ್ಲಿ ಬಂದು ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಿದ್ದಾರೆ.
ಬೃಹತ್ ಸಾಲ ಮತ್ತು ವಿನಿಮಯ ಮೇಳ ಆಯೋಜನೆಯಿಂದಲೂ ವಾಹನ ಖರೀದಿಯು ಇಮ್ಮಡಿಗೊಳಿಸಿದಂತಾಗಿದೆ. ಜೂ.8ರಿಂದ ವಾಹನಗಳ ವಿನಿಮಯ ಮತ್ತು ಮಾರಾಟದಲ್ಲಿ ದಾಖಲೆ ಸೃಷ್ಟಿಯಾಗಿರುವುದು ‘ಸುರಕ್ಷಿತ ಅಂತರ’ ಕಾಪಾಡುವ ಉದ್ದೇಶದಿಂದಲೇ ಎನ್ನುವುದು ಖಚಿತ. ಗ್ರಾಹಕರ ಸುರಕ್ಷತೆ ಹಾಗೂ ‘ಸುರಕ್ಷಿತ ಅಂತರ’ ಕಾಯ್ದುಕೊಂಡು ಪ್ರಯಾಣಿಸಲು ಹೋಂಡಾ ದ್ವಿಚಕ್ರ ವಾಹನವನ್ನು ಖರೀದಿಸಲು ಕಾಂಚನ ಹೋಂಡಾ ಜೂ.13ರವರೆಗೆ ಸುವರ್ಣಾವಕಾಶ ಕಲ್ಪಿಸಿದೆ.