ಬೈಕ್ ಅಪಘಾತ: ಗಾಯಾಳು ಮೃತ್ಯು
Update: 2020-06-09 22:21 IST
ಅಜೆಕಾರು, ಜೂ.10: ಅಂಡಾರು ಗ್ರಾಮದ ಮಂಗಳನಗರ ಕ್ರಾಸ್ ಎಂಬಲ್ಲಿ ಸಂಭವಿಸಿದ ಬೈಕ್ ಅಪಘಾತದ ಗಾಯಾಳು ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಅನಿಲ್ ಡಿಸೋಜ(36) ಎಂದು ಗುರುತಿಸಲಾಗಿದೆ. ಇವರು ಮೇ 29ರಂದು ಸಂಜೆ ಕಾಡುಹೊಳೆ ಎಂಬಲ್ಲಿಂದ ಶಿರ್ಲಾಲು ಕಡೆಗೆ ತನ್ನ ಬೈಕಿನಲ್ಲಿ ಹೋಗುತ್ತಿರುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸ್ಕಿಡ್ ಆಗಿ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಇವರು, ಜೂ.8ರಂದು ಸಂಜೆ 6ಗಂಟೆಗೆ ಚಿಕಿತ್ಸೆ ಫಲ ಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.