×
Ad

ಕೋಳಿ ಅಂಕ: ಐವರ ಬಂಧನ

Update: 2020-06-09 22:24 IST

ಪಡುಬಿದ್ರಿ, ಜೂ.9: ಎಲ್ಲೂರು ಗ್ರಾಮದ ಉಳ್ಳೂರು ಎಂಬಲ್ಲಿ ಜೂ.8 ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿರುವ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.

ಬೊಳಿಂಜೆಯ ರಾಜೇಶ ಶೆಟ್ಟಿ(30), ಕುತ್ಯಾರಿನ ಸತೀಶ ಶೆಟ್ಟಿ(36), ರಾಜೇಶ ಪೂಜಾರಿ(42), ಕಳತ್ತೂರಿನ ರವೀಂದ್ರ ಶೆಟ್ಟಿ(56), ಅವರಾಲುವಿನ ದಿಲೀಪ್ (30) ಬಂಧಿತ ಆರೋಪಿಗಳು. ಇವರಿಂದ 6,910ರೂ. ನಗದು, 6 ಮೊಬೈಲ್‌ಗಳು, 3,500ರೂ. ವೌಲ್ಯದ ಮೂರು ಕೋಳಿಗಳು, 2 ಸಣ್ಣ ಕತ್ತಿ, 2 ಕಾರುಗಳು, 8 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News