×
Ad

ಉಡುಪಿ ಜಾಮೀಯ ಮಸೀದಿಯಲ್ಲಿ ಜೂನ್ ಅಂತ್ಯಕ್ಕೆ ನಮಾಝ್‌ಗೆ ಅವಕಾಶ

Update: 2020-06-09 22:40 IST

ಉಡುಪಿ, ಜೂ.9: ಉಡುಪಿ ನಗರದ ಹೃದಯ ಭಾಗದಲ್ಲಿರುವ ಉಡುಪಿ ಜಾಮಿಯಾ ಮಸೀದಿಗೆ ಅಪರಿಚಿತರು ಮತ್ತು ಪ್ರಯಾಣಿಕರು ನಮಾಝಿ ಗಾಗಿ ಬರುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮ ಮತ್ತು ನಿರ್ವ ಹಣೆಯ ಬಗ್ಗೆ ಗಮನದಲ್ಲಿರಿಸಿಕೊಂಡು ಮಸೀದಿಯನ್ನು ಜೂನ್ ತಿಂಗಳ ಕೊನೆಯಲ್ಲಿ ನಮಾಝ್‌ಗೆ ಅವಕಾಶ ಮಾಡಿಕೊಡುವ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾಗಿದೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸಮಾಲೋಚನಾ ಸಭೆಯಲ್ಲಿ ತೆಗೆದು ಕೊಂಡ ನಿರ್ಣಯವನ್ನು ಮತ್ತು ಸರಕಾರದ ಮಾರ್ಗಸೂಚಿಯನ್ನು ಗಮನ ದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಮಸೀದಿಯ ಆಡಳಿತ ಸಮಿತಿಯು ತೆಗೆದುಕೊಂಡಿದೆ.

ಒಂದು ವೇಳೆ ಕೊರೋನ ಸಂಕಟದ ವಿಚಾರದಲ್ಲಿ ಅನಿರೀಕ್ಷಿತ ಬೆಳವಣಿಗೆ ಉಂಟಾದಲ್ಲಿ ಈಗ ತೆಗೆದುಕೊಂಡ ನಿರ್ಧಾರಗಳನ್ನು ಪುನರ್ ಪರಿಶೀಲಿಸಿ ಹೊಸದಾಗಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News