ಕಾಸರಗೋಡು : ಮುಸ್ಲಿಂ ಲೀಗ್ ಮುಖಂಡ ಮೆಟ್ರೋ ಮುಹಮ್ಮದ್ ಹಾಜಿ ನಿಧನ
Update: 2020-06-10 14:19 IST
ಕಾಸರಗೋಡು : ಸಾಮಾಜಿಕ ಕಾರ್ಯಕರ್ತ, ಮುಸ್ಲಿಂ ಲೀಗ್ ಮುಖಂಡ ಮೆಟ್ರೋ ಮುಹಮ್ಮದ್ ಹಾಜಿ (70) ಇಂದು ಮಧ್ಯಾಹ್ನ ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮುಹಮ್ಮದ್ ಹಾಜಿ ಸಾಮಾಜಿಕ, ಸಾಂಸ್ಕೃತಿಕ, ಕಾರುಣ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಮುಸ್ಲಿಂ ಲೀಗ್ ಕಾರ್ಯಕಾರಿ ಸಮಿತಿ ಸದಸ್ಯ, ಸುನ್ನಿ ಯುವಜನ ಸಂಘ ರಾಜ್ಯ ಉಪಾಧ್ಯಕ್ಷ , ಕಾಞ೦ಗಾಡ್ ಸಂಯುಕ್ತ ಜಮಾಅತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.