×
Ad

ವಿಮಾನಕ್ಕೆ ಮೂರು ಬಾರಿ ಅಪ್ಪಳಿಸಿದ ಮಿಂಚು - ವೀಡಿಯೊ ವೈರಲ್

Update: 2020-06-10 18:01 IST

ಲಂಡನ್:  ಲಂಡನ್ ಹೀತ್ರೋ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಲ್ಯಾಂಡ್ ಆಗಲು ಇನ್ನೇನು ಕೆಲವೇ ಕ್ಷಣಗಳಿವೆಯೆನ್ನುವಾಗ ವಿಮಾನಕ್ಕೆ ಮೂರು ಬಾರಿ ಮಿಂಚು ಅಪ್ಪಳಿಸಿದ ವಿಸ್ಮಯಕಾರಿ ವೀಡಿಯೋವೊಂದು  ವೈರಲ್ ಆಗಿದೆ. ಪ್ರತಿಕೂಲ ಹವಾಮಾನ ಇರುವ ಹೊರತಾಗಿಯೂ ವಿಮಾನ ಲ್ಯಾಂಡಿಂಗ್ ಆಗಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದ್ದು ಕೇಂದ್ರ ಲಂಡನ್ ಪ್ರದೇಶದಿಂದ ಈ ವೀಡಿಯೋ ತೆಗೆಯಲಾಗಿದೆ ಎನ್ನಲಾಗಿದೆ.

ಮಿಂಚು ಮೂರು ಬೇರೆ ಬೇರ ದಿಕ್ಕುಗಳಿಂದ ವಿಮಾನವನ್ನು ಅಪ್ಪಳಿಸಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಆದರೆ ಅದೃಷ್ಟವಶಾತ್ ವಿಮಾನಕ್ಕೆ ಯಾವುದೇ ಅಪಾಯವಾಗದೆ ಅದು ತನ್ನ ಹಾರಾಟ ಮುಂದುವರಿಸಿತ್ತು.

ಇಂತಹ ಪ್ರತಿಕೂಲ ಹವಾಮಾನದಲ್ಲೂ ಯಾವುದೇ ತೊಂದರೆಯುಂಟಾಗದ ರೀತಿಯಲ್ಲಿ ವಿಮಾನಗಳನ್ನು ನಿರ್ಮಿಸಲಾಗುವುದರಿಂದ ಈ ವಿಮಾನಕ್ಕೂ ಈ ಮಿಂಚು ಬಡಿದರೂ ಯಾವುದೇ ಸಮಸ್ಯೆ ಎದುರಾಗಿಲ್ಲ.

ಅಷ್ಟಕ್ಕೂ ವಿಮಾನಗಳಿಗೆ ಮಿಂಚು ಬಡಿಯುವುದು ಸಾಮಾನ್ಯ. ಪ್ರತಿಯೊಂದು ವಿಮಾನಕ್ಕೂ ಕನಿಷ್ಠ ಎರಡು ವರ್ಷಗಳಿಗೊಮ್ಮೆಯಾದರೂ ಮಿಂಚು ಬಡಿಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News