×
Ad

ಪ್ರತ್ಯೇಕ ಪ್ರಕರಣ : ಇಬ್ಬರು ಆತ್ಮಹತ್ಯೆ

Update: 2020-06-10 21:57 IST

ಮಲ್ಪೆ, ಜೂ. 10: ಮಲ್ಪೆಯ ಬಂದರಿನಲ್ಲಿ ಮೀನುಗಾರಿಕಾ ವೃತ್ತಿಯಲ್ಲಿದ್ದ ಭಾಗ್ಯರಾಜ್ (27) ಎಂಬವರು ನಿನ್ನೆ ರಾತ್ರಿ 10:30ರ ಸುಮಾರಿಗೆ ಸ್ನೇಹಿತರ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದವರು, ಇಂದು ಬೆಳಗ್ಗೆ 8:30ರ ಸುಮಾರಿಗೆ ಬಾಪು ತೋಟದ ಧಕ್ಕೆ ಬಳಿ ನಿಲ್ಲಿಸಲಾದ ಶ್ರೀದುರ್ಗಾ ಎಂಬ ಹೆಸರಿನ ಹಳೆಯ ಚಾಲನೆಯಲ್ಲಿಲ್ಲದ ಬೋಟಿನ ಕಂಬಕ್ಕೆ ನೈಲಾನ್ ರೋಪನ್ನು ಕಟ್ಟಿ ಅದರಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ: ವಿಪರೀತ ಕುಡಿತದ ಚಟವನ್ನು ಹೊಂದಿದ್ದ ವಾಸುದೇವ ಆಚಾರ್ಯ (71) ಎಂಬವರು ಮಂಗಳವಾರ ಅಪರಾಹ್ನ 3 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದು, ರಾತ್ರಿಯಾದರೂ ಮನೆಗೆ ಮರಳದಿದ್ದಾಗ ಮನೆಯವರು ಹುಡುಕಾಡಿದ್ದು, ಇಂದು ಬೆಳಗ್ಗೆ ಶಿವರಾಯ ಎಂಬವರ ಜಾಗದಲ್ಲಿದ್ದ ಗೋಳಿಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News