×
Ad

ಎಂಆರ್‌ಪಿಎಲ್‌ನ ಡೈರೆಕ್ಟರ್ ರಿಫೈನರಿ ಆಗಿ ಸಂಜಯ್ ವರ್ಮ ಆಯ್ಕೆ

Update: 2020-06-10 22:30 IST

ಮಂಗಳೂರು, ಜೂ.10: ಮಂಗಳೂರಿನ ಪ್ರತಿಷ್ಠಿತ ಎಂಆರ್‌ಪಿಎಲ್ ಸಂಸ್ಥೆಯ ಡೈರೆಕ್ಟರ್ ರಿಫೈನರಿ ಆಗಿ ಸಂಜಯ್ ವರ್ಮ ಆಯ್ಕೆಯಾಗಿದ್ದಾರೆ.

ರಿಫೈನರಿ ಪೆಟ್ರೋಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಕ್ಷೇತ್ರಗಳಲ್ಲಿ 30ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಸಂಜಯ್ ವರ್ಮ, ಎಂಆರ್‌ಪಿಎಲ್‌ನಲ್ಲಿ ಪ್ರಾಜೆಕ್ಟ್ಸ್ ಆಪರೇಶನ್ಸ್ ಮೆಟೀರಿಯಲ್ಸ್ ಯುಟಿಲಿಟೀಸ್ ಮುಂತಾದ ವಿಭಾಗಗಳಲ್ಲಿ 25 ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ವರ್ಮ ಇಲ್ಲಿಯವರೆಗೆ ಎಂಆರ್‌ಪಿಎಲ್‌ನಲ್ಲಿ ಗ್ರೂಪ್ ಜನರಲ್ ಮ್ಯಾನೇಜರ್ ಇನ್‌ಚಾರ್ಜ್ ರಿಫೈನರಿ ಆಗಿದ್ದು, ಎಂಎಸ್‌ಟಿಪಿಎಲ್ ಸಂಸ್ಥೆಯ ನಿರ್ದೇಶಕರು ಸಹ ಆಗಿದ್ದಾರೆ. ಜಬಲ್ಪುರ್ ನ ಗೌರ್ಮೆಂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಮೆಕ್ಯಾನಿಕಲ್ ಪದವಿ ಪೂರೈಸಿದ ವರ್ಮ, ಇಂಡೋಗುಲ್ಫ್ ಫರ್ಟಿಲೈಸರ್ಸ್ ರಿಲಯನ್ಸ್ ಇಂಡಸ್ಟ್ರೀಸ್ ಮುಂತಾದ ಪ್ರಖ್ಯಾತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಒಎನ್‌ಜಿಸಿ-ಎಂಆರ್‌ಪಿಎಲ್‌ನ ಪ್ರಧಾನ ವ್ಯವಸ್ಥಾಪಕ (ಕಾರ್ಪೊರೇಟ್ ಕಮ್ಯೂನಿಕೇಶನ್ಸ್) ರುಡಾಲ್ಫ್ ವಿ.ಜೆ. ನರೋನ್ಹ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News