×
Ad

ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ

Update: 2020-06-10 22:32 IST

ಮಂಗಳೂರು, ಜೂ.10: ಕಟ್ಟಡ ಕಾರ್ಮಿಕ ಸಂಘಯಾದ ಸಿಐಟಿಯು-ಸಿಡಬ್ಲೂಎಫ್‌ಐ ಯೆಯ್ಯಡಿ-ಕೊಂಚಾಡಿಯ ಕಚೇರಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಯಿತು.

ದಯಾನಂದ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಕೃಷ್ಣಪ್ಪ ಕೊಂಚಾಡಿ, ನಿತಿನ್ ಬಂಗೇರ ಕೊಪ್ಪಲಕಾಡು, ಡಿವೈಎಫ್‌ಐನ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ನವೀನ್ ಬೊಲ್ಪುಗುಡ್ಡೆ, ದಯಾನಂದ ಕೊಪ್ಪಲಕಾಡು ಉಪಸ್ಥಿತರಿದ್ದರು.

ರವಿಚಂದ್ರ ಕೊಂಚಾಡಿ ನೋಂದಾಯಿತ ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಪಾಂಡುರಂಗ ಕೊಂಚಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News