ನೂರುಲ್ ಹುದಾ ಯುಎಇ ಸಮಿತಿ : ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟಣೆ
ಮಂಗಳೂರು : ನೂರುಲ್ ಹುದಾ ಯುಎಇ ಸಮಿತಿಯು ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ "ರೋಗಗಳ ಕಾಲದಲ್ಲಿ ಪವಿತ್ರ ಇಸ್ಲಾಂ, ಅದರ ಪ್ರಸಕ್ತಿ ಮತ್ತು ಪರಿಹಾರಗಳು" ಹಾಗೂ "ಕೋವಿಡ್-19 ನಂತರದ ಜನ ಜೀವನ, ಆರ್ಥಿಕ ಬಿಕ್ಕಟ್ಟು ಮತ್ತು ಸುಧಾರಣೆಗಳು" ಎಂಬ ವಿಷಯದಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿತ್ತು.
ಪ್ರಬಂಧ ಸ್ಪರ್ಧೆಯಲ್ಲಿ ಜೆ.ಎಂ. ಕಲ್ಲಡ್ಕ ಮುದರ್ರಿಸ್ ಶೇಖ್ ಮುಹಮ್ಮದ್ ಫೈಝಿ ಇರ್ಫಾನಿ ಅಲ್ ಅಝ್ಹರಿ ಪ್ರಥಮ, ಆಯಿಷಾ ಎಸ್.ಎ ಇಂದಬೆಟ್ಟು, ಬೆಳ್ತಂಗಡಿ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ದೇಶ, ವಿದೇಶಗಳ ಸುಮಾರು ನಲವತ್ತಕ್ಕೂ ಹೆಚ್ಚು ಸ್ಪರ್ಧಾರ್ತಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಅಹ್ಮದ್ ನಯೀಂ ಫೈಝಿ ಮುಕ್ವೆ, ಅನ್ವರ್ ಕೊಲ್ಪೆ ಮತ್ತು ಅಬ್ದುಲ್ ಲತೀಫ್ ಕೌಡಿಚ್ಚಾರ್, ಸಂಯೋಜಕರಾಗಿ ಅನ್ವರ್ ಮಣಿಲ, ಮುಹಮ್ಮದ್ ಅಶ್ರಫ್ ಪರ್ಲಡ್ಕ ಮತ್ತು ಅಬ್ದುಲ್ ಅಝೀಝ್ ಸೋಂಪಾಡಿ ಅವರು ಸಹಕರಿಸಿದ್ದಾರೆ ಎಂದು ನೂರುಲ್ ಹುದಾ ಯುಎಇ ಸಮಿತಿಯ ಅಧ್ಯಕ್ಷ ಶರೀಫ್ ಕಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.