ಮಂಗಳೂರು: ಮದ್ರಸ ಪುಸ್ತಕ ಮೇಳಕ್ಕೆ ಚಾಲನೆ
ಮಂಗಳೂರು : ಶಂಸುಲ್ ಉಲಮಾ ಪಬ್ಲಿಕೇಶನ್‍ನ ಎಂ. ಆರ್ ಬುಕ್‍ಸ್ಟಾಲ್ ಮಂಗಳೂರು. ಇದರ ಅಧೀನದಲ್ಲಿ ಕಳೆದ 15 ವರ್ಷಗಳಿಂದ ಮಂಗಳೂರಿನ ಸ್ಟೇಟ್ ಬ್ಯಾಂಕಿನಲ್ಲಿರುವ ಪಿಯೊನೀರ್ ಕಾಂಪ್ಲೆಕ್ಸಿನಲ್ಲಿ ಮದ್ರಸ ಪ್ರಾರಂಭೋತ್ಸವದ ಭಾಗವಾಗಿ ಪ್ರತೀ ವರ್ಷ ನಡೆಯುತ್ತಿದ್ದ ಪುಸ್ತಕ ಮೇಳ, ಈ ವರ್ಷ ಕೋವಿಡ್-19 ಕಾರಣದಿಂದ ಜೂನ್ 1ರಿಂದ ಆನ್‍ಲೈನ್ ಮೂಲಕ ನಡೆಯುವ ಕ್ಲಾಸುಗಳ ಪ್ರಯೋಜನ ಪಡೆಯಲಿಕ್ಕಾಗಿ ಪುಸ್ತಕ ಮೇಳಕ್ಕೆ ಚಾಲನೆಗೊಂಡಿದೆ.
ಪುಸ್ತಕ ಮೇಳದಲ್ಲಿ 80 ಲಕ್ಷಕ್ಕಿಂತಲೂ ಹೆಚ್ಚು ಧಾರ್ಮಿಕ ಗ್ರಂಥಗಳು ವಿಧೇಶ ರಾಜ್ಯಗಳ ಕುರ್‍ಆನ್ ಗ್ರಂಥಗಳು ಮದ್ರಸ ವಿದ್ಯಾರ್ಥಿಗಳ 1ರಿಂದ +2 ತರಗತಿ ವರೆಗಿನ ಪಠ್ಯ ಪುಸ್ತಕಗಳು, ಅರಬಿಕ್ ಮಾರ್ಜಿನ್ ಇರುವ ನೋಟ್ ಪುಸ್ತಕಗಳು ಶಾಲಾ ಮದ್ರಸ ಉಪಯುಕ್ತ ಸಾಮಗ್ರಿಗಳು ಪುಸ್ತಕ ಮೇಳದಲ್ಲಿ ಲಭ್ಯವಿದೆ. ಜುಲೈ 15ರ ತನಕ ನಡೆಯುವ ಪುಸ್ತಕ ಮೇಳ ಪ್ರತೀ ದಿನ ಬೆಳಿಗ್ಗೆ 8 ಗಂಟಿಯಿಂದ ಸಂಜೆ 7ಗಂಟೆಯ ತನಕ ಕಾರ್ಯಾಚರಿಸಲಿದೆ ಎಂದು ಪುಸ್ತಕ ಮೇಳದ ವ್ಯವಸ್ತಾಪಕರಾದ ಮುಸ್ತಫ ಫೈಝಿ ಕಿನ್ಯ, ರಫೀಖ್ ಅಜ್ಜಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9845404610, 9481017431 ಸಂಪರ್ಕಿಸಬಹುದು.