ಪುದು ಗ್ರಾಮದಕ್ಕೆ ಶೀರ್ಘದಲ್ಲೇ ಪಿಯುಸಿ, ಪದವಿ ಕಾಲೇಜು: ಯು.ಟಿ.ಖಾದರ್
ಬಂಟ್ವಾಳ, ಜೂ.10: ಪುದು ಗ್ರಾಮದ ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಊರಿನಲ್ಲೇ ಉನ್ನತ ಶಿಕ್ಷಣ ಪಡೆಯುವಂತಾಗಲು ಗ್ರಾಮಕ್ಕೆ ಪಿಯುಸಿ, ಪದವಿ ಕಾಲೇಜನ್ನು ಶೀರ್ಘದಲ್ಲೇ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳವಾರ ಪುದು ಗ್ರಾಮದ ಸುಜೀರು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 42 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ 4 ತರಗತಿ ಕೊಠಡಿಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಸುಜೀರು ಶಾಲೆಯ ಶಿಥಿಲವಾದ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವುದು ಬಹುಕಾಲದ ಬೇಡಿಕೆಯಾಗಿದೆ. ಇದೀಗ ಆ ಬೇಡಿಕೆ ಈಡೇರಿದ್ದು ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ ಎಂದು ಹೇಳಿದ ಅವರು, ಗ್ರಾಮದ ರಸ್ತೆ ಸಹಿತ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ರವೀಂದ್ರ ಕಂಬಳಿ, ಜಿ.ಪಂ. ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ, ಪುದು ತಾ.ಪಂ. ಮಾಜಿ ಸದಸ್ಯ ಆಸೀಫ್ ಇಕ್ವಾಲ್, ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ,ಉಪಾಧ್ಯಕ್ಷೆ ಲಿಡಿಯಾ ಪಿಂಟೊ, ಶಿಕ್ಷಣ ಇಲಾಖೆಯ ಸುಶೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ, ಗ್ರಾ.ಪಂ. ಸದಸ್ಯರಾದ ಇಕ್ಬಾಲ್ ಸುಜೀರ್, ಭಾಸ್ಕರ ರೈ, ಕಿಶೋರ್ ಸುಜೀರ್, ಝಾಯೀರ್ ಕುಂಪನಮಜಲ್, ಲವೀನ ಕುಂಪನಮಜಲ್, ಹೇಮಲತಾ, ರಶೀದಾ ಮಾರಿಪಳ್ಳ, ಮಮ್ತಾಝ್ ಸುಜೀರ್, ರೆಹನಾ ಮಾರಿಪಳ್ಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಅಧ್ಯಕ್ಷ ಇಮ್ತಿಯಾಝ್ ತುಂಬೆ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್, ಪುದು ಯುವ ಕಾಂಗ್ರೆಸ್ ಮುಖಂಡ ಮಜೀದ್ ಪೇರಿಮಾರ್, ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಶಾಂ ಫರಂಗಿಪೇಟೆ, ಪ್ರಮುಖರಾದ ಎಂ.ಕೆ.ಮುಹಮ್ಮದ್, ಸಲಾಂ ಮಲ್ಲಿ, ಬಿ.ಎಂ.ಮುಹಮ್ಮದ್ ತುಂಬೆ, ಅಶೋಕ್ ಶೆಟ್ಟಿ ಸುಜೀರ್, ಮಜೀದ್ ಫರಂಗಿಪೇಟೆ, ಇನ್ಶಾದ್ ಮಾರಿಪಳ್ಳ, ಇಸ್ಮಾಯೀಲ್ ಕುಂಜತ್ಕಲ, ಇಮ್ತಿಯಾಝ್ ಮಾರಿಪಳ್ಳ, ಸದಾಶಿವ ಕುಮ್ಡೇಲ್, ಸಲ್ಮಾನ್ ಫಾರಿಸ್, ರಿಲ್ವಾನ್ ಫರಂಗಿಪೇಟೆ, ಪಶ್ವತ್ ಪಚ್ಚು ಫರಂಗಿಪೇಟೆ, ಮಜೀದ್ ಕುಂಪನಮಜಲ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿದರು. ಸುಮನಾ ಕಾರ್ಯಕ್ರಮ ನಿರೂಪಿಸಿದರು.