×
Ad

ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್

Update: 2020-06-11 21:28 IST

ಉಡುಪಿ, ಜೂ.11: 2019-20ನೇ ಸಾಲಿನ ಆಯವ್ಯಯದಲ್ಲಿ ಕೇಂದ್ರ ಸರಕಾರ ಮೀನುಗಾರರಿಗೆ, ಮೀನು ಕೃಷಿಕರಿಗೆ ಘೋಷಿಸಿದ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಸೌಲಭ್ಯವನ್ನು 2020-21ನೇ ಸಾಲಿಗೂ ವಿಸ್ತರಿಸಲಾಗಿದೆ.

ಆರ್‌ಬಿಐನ ಮಾರ್ಗಸೂಚಿಯಂತೆ ಸುಸ್ತಿದಾರರಲ್ಲದ, ಮೀನು ಉತ್ಪಾದನೆ ಯಲ್ಲಿ ನಿರತರಾದ ಮೀನುಗಾರರು, ಮೀನು ಕೃಷಿಕರು ಈ ಸೌಲಭ್ಯ ವನ್ನು ಪಡೆದುಕೊಳ್ಳಬಹುದಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ನ ಉದ್ದೇಶ ಮೀನು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವ ಮೀನುಗಾರರಿಗೆ ದುಡಿಯುವ ಬಂಡವಾಳ ಒದಗಿಸುವುದಾಗಿದೆ.

ಪಂಜರ ಮೀನು ಕೃಷಿ, ಸಿಗಡಿ, ಕಲ್ಲ, ಪಚ್ಚಿಲೆ ಕೃಷಿ ಇತ್ಯಾದಿಗಳನ್ನು ಕೈಗೊಳ್ಳುತ್ತಿ ರುವ ಮೀನು ಕೃಷಿಕರು ಮತ್ತು ಬೋಟು/ದೋಣಿಗಳನ್ನು ಹೊಂದಿರುವ ಮೀನುಗಾರರು ಅವರವರ ಅವಶ್ಯಕತೆಗೆ ತಕ್ಕಂತೆ ನಿಗದಿತ ಮಿತಿಯಲ್ಲಿ ದುಡಿಯುವ ಬಂಡವಾಳವನ್ನು ಅಲ್ಪಕಾಲಿಕ ಸಾಲವಾಗಿ ಪಡೆದುಕೊಳ್ಳ ಬಹುದಾಗಿದೆ. ಮೀನುಗಾರರು ಈ ಯೋಜನೆಯ ಲಾಭ ಪಡೆಯಲು ಜೂನ್ 10ರಿಂದ ಆ.10ರವರೆಗೆ ಎರಡು ತಿಂಗಳ ಅವಧಿ ಯಲ್ಲಿ ವಿಶೇಷ ಅಭಿಯಾನದ ಅಂಗವಾಗಿ ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿತ ಬ್ಯಾಂಕ್‌ಗಳಿಗೆ ಸಲ್ಲಿಸಬಹುದಾಗಿದೆ.

ಬ್ಯಾಂಕ್‌ಗಳಿಂದ ಆಯ್ಕೆ ಮಾಡಲಾದ ಅರ್ಹ ಫಲಾನುಭವಿಗಳು ಕಿಸಾನ್ ಕಾರ್ಡ್‌ನ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News