×
Ad

ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Update: 2020-06-11 21:30 IST

ಉಡುಪಿ, ಜೂ.11: ಪೊಲೀಸ್ ಇಲಾಖೆಯಲ್ಲಿ 2020-21ನೇ ಸಾಲಿನ ನೇಮಕಾತಿಗೆ ಸಂಬಂದಿಸಿದಂತೆ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿ ಸಂಬಂಧ ಅರ್ಜಿ ಆಹ್ವಾನಿಸಲಾಗಿದ್ದು, ಪ್ರಸಕ್ತ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ಈ ಹಿಂದೆ ನಿಗದಿ ಪಡಿಸಿದ್ದ ಅರ್ಜಿ ಆಹ್ವಾನದ ದಿನಾಂಕಗಳನ್ನು ಮಾತ್ರ ವಿಸ್ತರಿಸಲಾಗಿದೆ. ಇನ್ನುಳಿದಂತೆ ಅರ್ಹತಾ ಷರತ್ತುಗಳಲ್ಲಿ ವಯೋಮಿತಿ ಸೇರಿದಂತೆ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

ಎಪಿಸಿ 444 ಹುದ್ದೆ ಮತ್ತು ಸಿಪಿಸಿ 558 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮರು ನಿಗದಿಗೊಳಿಸಲಾದ ಕೊನೆಯ ದಿನಾಂಕ ಜುಲೈ 9 ಆಗಿದೆ. ಶುಲ್ಕ ಪಾವತಿಸಲು ಜುಲೈ 13 ಕೊನೆಯ ದಿನವಾಗಿದೆ. ಸಿಪಿಸಿ 2007 ಮತ್ತು ಎಪಿಸಿ 1005 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮರು ನಿಗದಿಗೊಳಿಸಲಾದ ಕೊನೆಯ ದಿನಾಂಕ ಜುಲೈ 13ಆಗಿದ್ದು, ಶುಲ್ಕ ಪಾವತಿಲು ಜುಲೈ 15 ಕೊನೆಯ ದಿನವಾಗಿದೆ.

ಸ್ಟೇ ಆರ್‌ಪಿಸಿ 252 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮರು ನಿಗದಿ ಪಡಿಸಲಾದ ಕೊನೆಯ ದಿನಾಂಕ ಜುಲೈ 6 ಆಗಿದ್ದು, ಶುಲ್ಕ ಪಾವತಿಸಲು ಜುಲೈ 8 ಕೊನೆಯ ದಿನಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News