×
Ad

ಎಂಟಿಎಸ್ ನೇಮಕಾತಿ ಪರೀಕ್ಷೆಯ ದಿನಾಂಕ ನಿರ್ಧಾರವಾಗಿಲ್ಲ: ಡಿಆರ್‌ಡಿಒ

Update: 2020-06-11 21:35 IST

ಹೊಸದಿಲ್ಲಿ, ಜೂ.11: ಕೊರೋನ ಸೋಂಕಿನ ಸನ್ನಿವೇಶವನ್ನು ಪರಿಶೀಲಿಸಿದ ಬಳಿಕ ಮಲ್ಟಿ ಟಾಸ್ಕಿಂಗ್ ಸ್ಟಾಫ್(ಎಂಟಿಎಸ್) ನೇಮಕಾತಿಗೆ ನಡೆಯುವ ಪರೀಕ್ಷೆಯ ದಿನಾಂಕವನ್ನು ನಿರ್ಧರಿಸಬೇಕಿದೆ. ಆ ಬಳಿಕ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಹೇಳಿದೆ. ಕೊರೋನ ಸೋಂಕಿನ ಕಾರಣದಿಂದ ಈ ಹಿಂದೆ ನಿರ್ಧರಿಸಿದಂತೆ ನೇಮಕಾತಿ ಪರೀಕ್ಷೆ ನಡೆಸಲಾಗಿಲ್ಲ. ಇದನ್ನು ಡಿಆರ್‌ಡಿಒ ಪ್ರವೇಶ ಪರೀಕ್ಷೆ:2019-20/ಎಂಟಿಎಸ್ ಜಾಹೀರಾತಿನ ಪ್ರಕಾರ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳೂ ಗಮನಿಸಬೇಕು ಎಂದು ಡಿಆರ್‌ಡಿಒ ಪ್ರಕಟಣೆ ತಿಳಿಸಿದೆ. ಕೊರೋನ ಸೋಂಕಿನ ಪರಿಸ್ಥಿತಿ ಹಾಗೂ ಕಾಲಕಾಲಕ್ಕೆ ಸರಕಾರ ಜಾರಿಗೊಳಿಸುವ ಮಾರ್ಗಸೂಚಿಯನ್ನು ಗಮನಿಸಿ, ಪರೀಕ್ಷೆಯ ದಿನಾಂಕವನ್ನು ನಿರ್ಧರಿಸಿ ಅಭ್ಯರ್ಥಿಗಳಿಗೆ ತಿಳಿಸಲಾಗುವುದು ಎಂದು ಡಿಆರ್‌ಡಿಒ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News