×
Ad

ಮಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಬಸ್ ಸೌಲಭ್ಯ

Update: 2020-06-11 21:50 IST

ಮಂಗಳೂರು, ಜೂ.11: ಮಂಗಳೂರು ವಿಭಾಗದ ಮಂಗಳೂರು ಬಸ್ ನಿಲ್ದಾಣದಿಂದ ಉತ್ತರಕರ್ನಾಟಕದ ಪ್ರಮುಖ ಸ್ಥಳಗಳಾದ ಬಳ್ಳಾರಿ, ಇಳಕಲ್, ಲಿಂಗಸ್ಗೂರು, ಬೆಳಗಾವಿ ಮುಂತಾದ ಸ್ಥಳಗಳಿಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಹೊಸ ನಾನ್ ಎಸಿ ಸ್ಲೀಪರ್ ವಾಹನಗಳೊಂದಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್‌ಒಪಿ (Standard operating procedure)ರಲ್ಲಿಯ ನಿರ್ದೇಶನಗಳಂತೆ ಮಂಗಳೂರು ವಿಭಾಗದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡಿ, ಪ್ರಯಾಣಿಕರ ವಿವರ ದಾಖಲಿಸಿ, ಸುರಕ್ಷಿತ ಅಂತರದೊಂದಿಗೆ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

ಬಸ್ ಸೌಲಭ್ಯ

* ಮಂಗಳೂರಿನಿಂದ ಸಂಜೆ 6:50ಕ್ಕೆ ಹೊರಟು ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಚನ್ನಗಿರೆ,ಹೊಳಲ್ಕೆರೆ, ಚಿತ್ರದುರ್ಗ, ಚಳ್ಳೆಕರೆ, ಬಳ್ಳಾರಿಗೆ ಬೆಳಗ್ಗೆ 7 ಗಂಟೆಗೆ ತಲುಪಲಿದೆ. (ಪ್ರಯಾಣ ದರ 800 ರೂ.)

* ಬಳ್ಳಾರಿಯಿಂದ ಸಂಜೆ 5:30ಕ್ಕೆ ಹೊರಟು ಚಳ್ಳೆಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಚೆನ್ನಗಿರೆ ಶಿವಮೊಗ್ಗ, ತೀರ್ಥಹಳ್ಳಿ, ಕುಂದಾಪುರ, ಮಂಗಳೂರಿಗೆ ಬೆಳಗ್ಗೆ 5 ಗಂಟೆಗೆ ತಲುಪಲಿದೆ. (ಪ್ರಯಾಣ ದರ 800 ರೂ.)
* ಮಂಗಳೂರಿನಿಂದ ಸಂಜೆ 7 ಗಂಟೆಗೆ ಹೊರಟು ಹುಬ್ಬಳ್ಳಿ, ಬದಾಮಿ, ಹುನಗುಂದ, ಲಿಂಗಸ್ಗೂರು ಬೆಳಗ್ಗೆ 7:30ಕ್ಕೆ ತಲುಪಲಿದೆ. (ಪ್ರಯಾಣ ದರ 950 ರೂ.)
* ಲಿಂಗಸ್ಗೂರಿನಿಂದ ಸಂಜೆ 4:30ಕ್ಕೆ ಹೊರಟು ಹುನಗುಂದ, ಬದಾಮಿ, ಹುಬ್ಬಳ್ಳಿ ಮಂಗಳೂರು ಬೆಳಗ್ಗೆ 5 ಗಂಟೆಗೆ ತಲುಪಲಿದೆ. (ಪ್ರಯಾಣ ದರ 950 ರೂ.)
* ಮಂಗಳೂರಿನಿಂದ ಸಂಜೆ 7:30ಕ್ಕೆ ಹೊರಟು ಹುಬ್ಬಳ್ಳಿ, ಗದಗ, ಗಜೇಂದ್ರಗಡ, ಇಳಕಲ್‌ಗೆ ಬೆಳಗ್ಗೆ 7 ಗಂಟೆ ತಲುಪಲಿದೆ. (ಪ್ರಯಾಣ ದರ 950 ರೂ.)
* ಇಳಕಲ್‌ನಿಂದ ಸಂಜೆ 6:30ಕ್ಕೆ ಹೊರಟು ಗಜೇಂದ್ರಗಡ, ಗದಗ, ಹುಬ್ಬಳ್ಳಿ ಮಂಗಳೂರಿಗೆ ಬೆಳಗ್ಗೆ 6 ಗಂಟೆಗೆ ತಲುಪಲಿದೆ. (ಪ್ರಯಾಣ ದರ 950 ರೂ.)
* ಮಂಗಳೂರಿನಿಂದ ಸಂಜೆ 6:30ಕ್ಕೆ ಹೊರಟು ಕುಂದಾಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಗೆ ಬೆಳಗ್ಗೆ 5:30ಕ್ಕೆ ತಲುಪಲಿದೆ. (ಪ್ರಯಾಣ ದರ 800 ರೂ.)
* ಬೆಳಗಾವಿಯಿಂದ ಸಂಜೆ 6:30ಕ್ಕೆ ಹೊರಟು ಧಾರವಾಡ, ಹುಬ್ಬಳ್ಳಿ, ಕುಂದಾಪುರ, ಮಂಗಳೂರಿಗೆ ಬೆಳಗ್ಗೆ 5:30ಕ್ಕೆ ತಲುಪಲಿದೆ. (ಪ್ರಯಾಣ ದರ 800 ರೂ.)
ಬಸ್ ಪ್ರಯಾಣಕ್ಕೆ ಆನ್‌ಲೈನ್ ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಒದಗಿಸಲಾಗಿದ್ದು, ವೆಬ್‌ಸೈಟ್ www.ksrtc.in ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್‌ನ್ನು ಸಂಪರ್ಕಿಸಬಹುದು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News