ಸುರಕ್ಷಿತ ಸೇವೆಗೆ ‘ದಿ ಓಶಿಯನ್ ಪರ್ಲ್’ ಹೋಟೆಲ್ ಗಳು ಸನ್ನದ್ಧ

Update: 2020-06-12 07:27 GMT

ಮಂಗಳೂರು, ಜೂ.12: ಕೊರೋನ ಲಾಕ್ ಡೌನ್ ಬಳಿಕ ಗ್ರಾಹಕರಿಗೆ ಅತ್ಯಂತ ಸುರಕ್ಷಿತ ಸೇವೆ ನೀಡಲು ‘ದಿ ಓಶಿಯನ್ ಪರ್ಲ್’ ಹೋಟೆಲ್ ಸಮೂಹ ಸಂಪೂರ್ಣ ಸಿದ್ಧವಾಗಿ ಪೂರ್ಣ ಪ್ರಮಾಣದಲ್ಲಿ ಎಲ್ಲ ಸೇವೆಗಳನ್ನು ಜೂನ್ 8 ರಿಂದ  ಪುನರಾರಂಭಿಸಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಆರೋಗ್ಯ ಮತ್ತು ನೈರ್ಮಲ್ಯ ದೃಷ್ಟಿಯಿಂದ ಅತಿಹೆಚ್ಚು ನಿಗಾ ವಹಿಸಿರುವ ಕರಾವಳಿಯ  ಹೋಟೆಲ್ ಗಳ ಪೈಕಿ ಮುಂಚೂಣಿಯಲ್ಲಿರುವ ದಿ ಓಶಿಯನ್ ಪರ್ಲ್. ಕೇವಲ ಗ್ರಾಹಕರಿಗೆ ಆತಿಥ್ಯ ನೀಡಲು ಪ್ರಸಿದ್ಧಿವಾಗಿರುವುದು ಮಾತ್ರವಲ್ಲ, ಇಂತಹ ಕಠಿಣ ಸಂದರ್ಭದಲ್ಲಿ  ಗ್ರಾಹಕರ ಸುರಕ್ಷತೆ ಬಗ್ಗೆ  ಅತಿಹೆಚ್ಚು ಕಾಳಜಿ ವಹಿಸಲಾಗುತ್ತಿದೆ. ವಿಶ್ವ ಅರೋಗ್ಯ ಸಂಸ್ಥೆ ಹಾಗು ರಾಜ್ಯ, ಕೇಂದ್ರ ಸರಕಾರಗಳ ಎಲ್ಲ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಹೋಟೆಲ್ ನಲ್ಲಿ ಅನುಸರಿಸಲಾಗುತ್ತಿದೆ ಎಂದು ದಿ ಓಶಿಯನ್ ಪರ್ಲ್ ಹೋಟೆಲ್ಸ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಬಿ.ಎನ್. ಗಿರೀಶ್ ತಿಳಿಸಿದ್ದಾರೆ.

ಹೋಟೆಲ್‌ಗೆ ಆಗಮಿಸುವ ಗ್ರಾಹಕರು ಯಾವುದೇ ಭಯ, ಸಂಶಯ ಪಡುವ ಅಗತ್ಯವಿಲ್ಲ. ಪ್ರತಿಯೊಂದು ಆಯಾಮದಲ್ಲೂ ಗರಿಷ್ಠ ಎಚ್ಚರಿಕೆ ವಹಿಸಲಾಗಿದೆ. ಹೊಟೇಲ್‌ನಲ್ಲಿ ಯಾವುದೇ ಕಾರಣಕ್ಕೂ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಇಲ್ಲ ಎನ್ನುವುದನ್ನು ಖಚಿತಪಡಿಸಿದ್ದೇವೆ. ಹೊಟೇಲ್ ನೊಳಗೆ  ಸುರಕ್ಷಿತ ಅಂತರ, ಗರಿಷ್ಟ ಸ್ವಚ್ಛತೆಯನ್ನು ಕಾಯ್ದುಕೊಳ್ಳುತ್ತಿದ್ದೇವೆ ಎಂದರು. ಪ್ರತಿಯೊಬ್ಬ ಅತಿಥಿಗೂ ಹೋಟೆಲ್ ಅತ್ಯಂತ ಸುರಕ್ಷಿತ ತಾಣವಾಗುವಂತೆ ಖಾತರಿಪಡಿಸಲು ಎಲ್ಲ ವೈಜ್ಞಾನಿಕ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬುದು ನಮ್ಮ ನೀತಿಯಾಗಿದೆ ಎಂದು ಗಿರೀಶ್ ಹೇಳಿದ್ದಾರೆ. 

ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೋಟೆಲ್‌ನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದರಲ್ಲಿ ರಾಜ್ಯದ ಹೋಟೆಲ್‌ಗಳಲ್ಲೇ ‘ದಿ ಓಶಿಯನ್ ಪರ್ಲ್’ಗೆ ಉನ್ನತ ಸ್ಥಾನವಿದೆ. ಕೊರೋನವನ್ನು ಸಮರ್ಥವಾಗಿ ಎದುರಿಸಿ ಗ್ರಾಹಕರಿಗೆ ಸುರಕ್ಷಿತ ಸೇವೆ ನೀಡಲು ಬದ್ಧರಾಗಿದ್ದೇವೆ. ಯಾವುದೇ ಚಿಂತೆ ಪಡದೇ ಧೈರ್ಯವಾಗಿ ಹೋಟೆಲ್ ಗೆ ಬಂದು ಉಳಿದುಕೊಳ್ಳಬಹುದು ಮತ್ತು ನಮ್ಮ ವಿವಿಧ ರೆಸ್ಟೋರೆಂಟ್ ಗಳಲ್ಲಿ ಆತಿಥ್ಯ ಸ್ವೀಕರಿಸಬಹುದು ಎಂದು ಅವರು ಸ್ಪಷ್ಟಪಡಿಸಿದರು.

ಸುರಕ್ಷತೆ ಹೇಗಿದೆ ?

ಮಂಗಳೂರಿನ ನವಭಾರತ್ ಸರ್ಕಲ್ ಹಾಗು ಬಿಜೈ ಕಾಪಿಕಾಡ್ ಮುಖ್ಯ ರಸ್ಥೆಯಲ್ಲಿ ಕಾರ್ಯಾಚರಿಸುತ್ತಿರುವ ‘ದಿ ಓಶಿಯನ್ ಪರ್ಲ್’ ಹಾಗು ಓಶಿಯನ್ ಪರ್ಲ್ ಇನ್  ಹೋಟೆಲ್ ಗಳಿ‌ಗೆ ಆಗಮಿಸುವ ಎಲ್ಲ ವಾಹನಗಳನ್ನು ಪ್ರವೇಶ ದ್ವಾರದಲ್ಲಿ ಸ್ಯಾನಿಟೈಝ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಅತಿಥಿಗಳ ಉಷ್ಣಾಂಶ (ಟೆಂಪರೇಚರ್) ಪರೀಕ್ಷಿಸಲಾಗುತ್ತಿದೆ. ಉಷ್ಣಾಂಶ ಅಧಿಕವಿದ್ದಲ್ಲಿ ಪ್ರವೇಶ ನಿಷಿದ್ಧ. ಬಳಿಕ ಗ್ರಾಹಕರಿಗೆ ಹ್ಯಾಂಡ್ ಸ್ಯಾನಿಟೈಸರ್ ಮಾಡುತ್ತೇವೆ. ಲಗೇಜ್‌ಗಳನ್ನೂ ಸ್ಯಾನಿಟೈಸ್ ಮಾಡಲಾಗುತ್ತದೆ.  ಎಲ್ಲ ಗ್ರಾಹಕರೂ ಮಾಸ್ಕ್ ಧರಿಸುವುದು ಕಡ್ಡಾಯ.

ಗ್ರಾಹಕರ ಪ್ರಯಾಣದ ವಿವರವನ್ನೂ ಇಲ್ಲಿ ದಾಖಲು ಮಾಡಲಾಗುತ್ತದೆ. ಗ್ರಾಹಕರು ಹೋಟೆಲ್ ಪ್ರವೇಶಿಸಿದ ಬಳಿಕ ರೂಮ್ ಗೆಸ್ಟ್‌ಗಳಿದ್ದರೆ ಅಂಥವರಿಗೆ ಅತ್ಯಾಧುನಿಕ ‘ಕಾಂಟ್ಯಾಕ್ಟ್‌ಲೆಸ್ ಚೆಕ್ ಇನ್’ (ಡಿಜಿಟಲ್ ತಪಾಸಣೆ) ವ್ಯವಸ್ಥೆ ಮಾಡಲಾಗಿದೆ.  ಕೊಠಡಿಯಲ್ಲೂ ವಿವಿಧ ಬಗೆಯ ಸೌಲಭ್ಯಗಳ ಜೊತೆಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಒಬ್ಬ ಅತಿಥಿ ರೂಮ್ ಬಿಟ್ಟ ಮೇಲೆ ಇನ್ನೊಬ್ಬರಿಗೆ ಅದನ್ನು ನೀಡುವ ಮೊದಲು 24 ಗಂಟೆ ಆ ರೂಮ್ ಅನ್ನು ಸಂಪೂರ್ಣ ಸ್ವಚ್ಛ ಮಾಡಲಾಗುತ್ತದೆ.

ಹೋಟೆಲ್ ಸಿಬ್ಬಂದಿಯು ಸ್ಪರ್ಶರಹಿತವಾಗಿ ಗ್ರಾಹಕರಿಗೆ ಆಹಾರ, ಖಾದ್ಯ ಸರಬರಾಜು ಮಾಡುತ್ತಿದ್ದಾರೆ. ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಪ್ರಾಮುಖ್ಯತೆ ನೀಡುವ ಭಾಗವಾಗಿ ಗ್ರಾಹಕರು ಬಿಲ್ ಪಾವತಿಗೆ ಬಳಸುವ ಕ್ರೆಡಿಟ್ ಕಾರ್ಡ್ ಸಹಿತ ಇನ್ನಿತರ ಕಾರ್ಡ್‌ಗಳನ್ನೂ ಸ್ಯಾನಿಟೈಝ್ ಗೆ ಒಳಪಡಿಸಲಾಗುತ್ತದೆ. ಗ್ರಾಹಕರು ಹೋಟೆಲ್ ಆಗಮಿಸಿ, ಆತಿಥ್ಯ ಸ್ವೀಕರಿಸಿ ನಿರ್ಗಮಿಸುವವರೆಗಿನ ಎಲ್ಲ ಸ್ಥಳಗಳನ್ನು ನಿರಂತರವಾಗಿ ಸ್ಯಾನಿಟೈಝ್ ಮಾಡಲಾಗುತ್ತದೆ. ಗ್ರಾಹಕರು ಕುಳಿತುಕೊಳ್ಳುವ ಎಲ್ಲ ಟೇಬಲ್‌ಗಳನ್ನು ಆರು ಅಡಿ ಅಂತರದಲ್ಲಿರಿಸಲಾಗಿದೆ. ‘ಬಫೆ’ಯಲ್ಲೂ ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಗುತ್ತಿದೆ.

ಹೋಟೆಲ್‌ಗೆ ಸಿಬ್ಬಂದಿ ಆಗಮಿಸಿದ ತಕ್ಷಣವೇ ಸ್ಯಾನಿಟೈಝ್ ‌ಗೆ ಒಳಗಾಗುತ್ತಾರೆ. ಸುರಕ್ಷತಾ ವಿಭಾಗ ಮತ್ತು ಹೌಸ್ ಕೀಪಿಂಗ್ ವಿಭಾಗದವರು ಪಿಪಿಇ ಕಿಟ್‌ಗಳನ್ನು ಧರಿಸುತ್ತಾರೆ. ಶೆಫ್‌ಗಳು ಕೂಡ ಮುಖಗವಸು, ಟೋಪಿ, ಗ್ಲೋಸ್ ಧರಿಸಿಯೇ ನೈರ್ಮಲ್ಯಕ್ಕೆ  ಆದ್ಯತೆ ನೀಡಿ ಖಾದ್ಯಗಳನ್ನು ತಯಾರಿಸುತ್ತಾರೆ. ಆರೋಗ್ಯ ಸುರಕ್ಷತಾ ತಜ್ಞರಿಂದ ತರಬೇತಿ ಪಡೆದ ಸಿಬ್ಬಂದಿಯು ಸದಾ ನೈರ್ಮಲ್ಯಕ್ಕೆ ಪ್ರಮುಖ ಆದ್ಯತೆ ನೀಡುತ್ತಾರೆ ಎಂದು ದಿ ಓಶಿಯನ್ ಪರ್ಲ್ ಹೊಟೇಲ್ಸ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಬಿ.ಎನ್.ಗಿರೀಶ್ ತಿಳಿಸಿದ್ದಾರೆ.

ಸಂಪೂರ್ಣ ಸುರಕ್ಷಿತ ಓಶಿಯನ್ ಪರ್ಲ್ ಹೇಗಿದೆ ? ಈ ವಿಡಿಯೋದಲ್ಲಿ ನೋಡಿ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News