ತೈಲಬೆಲೆ ಇಳಿಕೆಗೆ ವೆಲ್ಪೇರ್ ಪಾರ್ಟಿ ಒತ್ತಾಯ
Update: 2020-06-12 22:16 IST
ಉಡುಪಿ, ಜೂ.12: ಲಾಕ್‌ಡೌನ್ ಕಾರಣದಿಂದಾಗಿ ಹಸಿವಿನಿಂದ ಬಳಲು ತ್ತಿರುವ ನಾಗರಿಕರಿಗೆ ಸ್ಪಂದಿಸ ಬೇಕಾಗಿದ್ದ ಸರಕಾರ ತೈಲಬೆಲೆ ಏರಿಸಿದ ನಿರ್ಧಾರ ಜನಸಾಮಾನ್ಯರ ಜೀವನವನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ಆರೆಪಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿ ದ್ದರೂ ಬಿಜೆಪಿ ಸರಕಾರ ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟ ಆಡು ತ್ತಿದೆ. ಪ್ರಪಂಚದಲ್ಲೇ ತೈಲ ಬೆಲೆಗೆ ಅತಿ ಹೆಚ್ಚು ಅಂದರೆ ಶೇ.69ರಷ್ಟು ತೆರಿಗೆ ವಿಧಿಸುವ ಪ್ರಸಕ್ತ ಸರಕಾರದ್ದಾಗಿದೆ. ಇದು ಜನ ವಿರೋಧಿಯಾಗಿದ್ದು, ಬೆಲೆ ಏರಿಕೆಯ ಮೇಲೆ ನೇರ ಪರಿಣಾಮ ಬೀಳಲಿದೆ. ಆದುರಿಂದ ಸರಕಾರ ಕೂಡಲೇ ಬೆಲೆ ಏರಿಕೆಯ ಈ ನಿರ್ಧಾರವನ್ನು ಮರು ಪರಿಶೀಲಿಸಿ ತೈಲಬೆಲೆ ಇಳಿಸ ಬೇಕೆಂದು ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ ಉದ್ಯಾವರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ