ಮಂಗಳೂರು: ಜೂ.15, 16ರಂದು ವಿದ್ಯುತ್ ನಿಲುಗಡೆ
ಮಂಗಳೂರು, ಜೂ.12: ತಾಲೂಕಿನ ಉಪಕೇಂದ್ರಗಳಿಂದ ಹೊರಡುವ 11 ‘ಕೆವಿ’ಯ ವಿವಿಧೆಡೆಯ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ, ದುರಸ್ತಿ ಕಾಮಗಾರಿ, ಜಂಗಲ್ ಕಟ್ಟಿಂಗ್ ಹಾಗೂ ಇತರ ನಿರ್ವಹಣಾ ಕಾಮಗಾರಿಗೆ ಸಂಬಂಧಿಸಿದಂತೆ ಜೂ.15 ಮತ್ತು 16ರಂದು ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.
ಕೊಣಾಜೆ: ಜೂ.15ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 110/33/11 ಕೆವಿ ಕೊಣಾಜೆ ಉಪಕೇಂದ್ರದಿಂದ ಹೊರಡುವ 11 ಕೆವಿ ಕೊಣಾಜೆ ಮತ್ತು 11 ಕೆವಿ ಉಳ್ಳಾಲ ಎಕ್ಸ್‌ಪ್ರೆಸ್ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ನಾಟೆಕಲ್, ದೇರಳಕಟ್ಟೆ, ರೆಂಜಾಡಿ, ಪನೀರ್, ಬಗಂಬಿಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆ ಮಾಡಲಾಗುತ್ತದೆ.
ತೋಕೂರು/ಕುಳಾಯಿ: ಜೂ.16ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ 11 ಕೆವಿ ತೋಕೂರು ಹಾಗೂ ಕುಳಾಯಿ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಹೊನ್ನೆಕಟ್ಟೆ, ವಿದ್ಯಾನಗರ, ಕುಳಾಯಿಗುಡ್ಡೆ, ಪ್ರೀತಿನಗರ, ಪ್ರಗತಿನಗರ, ಮುಚ್ಚಿಕೆರೆ, ಪ್ರೇಮನಗರ, ಬಗ್ಗುಂಡಿ, ತೋಕೂರು, ಕುಳಾಯಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ.
ಗುರುಪುರ: ಜೂ.16ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 110/11 ಕೆವಿ ಗುರುಪುರ ಉಪಕೇಂದ್ರದಿಂದ ಹೊರಡುವ 11 ಕೆವಿ ಕುಕ್ಕಟ್ಟೆ ಮತ್ತು ಮುಚ್ಚೂರು ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ವಿಕಾಸನಗರ, ಪಡ್ಡಾಯಿಪದವು, ಕೈಕಂಬ ಪೇಟೆ, ಕಂದಾವರ ಪದವು, ಅಸ್ರಾರ್‌ನಗರ, ಶಾಂತಿನಗರ, ಸೂರಲ್ಪಾಡಿ, ಗುರುಕಂಬ್ಳ, ಗಂಜೀಮಠ, ಅಳಿಕೆಪದವು, ಮುಂಡೇವು, ಗಾಂಧೀನಗರ, ಕುಕ್ಕಟ್ಟೆ, ನಾರ್ಲಪದವು, ಘಟ್ನಮಜಲು, ಮೊಗರು, ಮಡಪಾಡಿ, ಪೂಪಾಡಿಕಲ್ಲು, ಬಸ್ತಿಗುಡ್ಡೆ, ಎಡಪದವು ಪೇಟೆ, ಕಣ್ಣುರಿ, ಮಿಜಾರ್, ಉರ್ಕಿ, ದಡ್ಡಿ, ಧೂಮಚಡವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣವಾಗಿ ನಿಲುಗಡೆಗೊಳ್ಳಲಿದೆ.
ಮೂಡುಬಿದಿರೆ: ಜೂ.16ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 110/11 ಕೆವಿ ಮೂಡುಬಿದಿರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಮೂಡುಬಿದಿರೆ, ಗಾಂಧೀನಗರ, ಕೋಟೆಬಾಗಿಲು, ಪುಚ್ಚೆಮೊಗರು, ಇರುವೈಲು ಫೀಡರ್‌ಗಳಲ್ಲಿ ನಿಯತಕಾಲಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಇದರಿಂದ ಮೂಡುಬಿದಿರೆ ಪೇಟೆ, ಮಾಸ್ತಿಕಟ್ಟೆ, ಗಾಂಧೀನಗರ, ಮಹಾವೀರ ಕಾಲೇಜು, ಒಂಟಿಕಟ್ಟೆ, ಕಡಲಕೆರೆ, ನಾಗರಕಟ್ಟೆ, ಅರಮನೆಬಾಗಿಲು, ಜ್ಯೋತಿನಗರ, ಜೈನ್‌ಪೇಟೆ, ಶೇಡಿಗುರಿ, ಹೊಸಬೆಟ್ಟು, ಪುಚ್ಚೆಮೊಗರು, ಅಲಂಗಾರು, ಕೋಟೆಬಾಗಿಲು, ಪ್ರಾಂತ್ಯ, ಕಲ್ಲಬೆಟ್ಟು, ಗಂಟಾಲ್‌ಕಟ್ಟೆ, ಬಿರಾವು, ತಾಕೊಡೆ, ಮಾರೂರು, ಹೊಸಂಗಡಿ, ಇರುವೈಲು, ಹೊಸ್ಮಾರ್‌ಪದವು, ಕೊನ್ನೆಪದವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆ ಕಂಡು ಬರಲಿದೆ ಎಂದು ಮೆಸ್ಕಾಂ ಇಲಾಖೆಯ ಪ್ರಕಟನೆ ತಿಳಿಸಿದೆ.